ಮಡಿಕೇರಿ, ಏ. 8 : ಪೆರಾಜೆಯ ಪಯಸ್ವಿನಿ ಬಳಗದಿಂದ ದಿ.ಕೇಶವ ಪೆರಾಜೆ ನೆನಪಿನಲ್ಲಿ ಪೆರಾಜೆಯ ಜ್ಯೋತಿ ಪ್ರೌಢಶಾಲೆಯಲ್ಲಿ ಐದು ದಿನಗಳ ಕಾಲ ಬೇಸಿಗೆ ಶಿಬಿರದ ಸಮಾರೋಪ ಕಾರ್ಯಕ್ರಮ ನಡೆಯಿತು.

ತಾ. 3 ರಂದು ಶಿಬಿರವನ್ನು ಉದ್ಘಾಟಿಸಲಾಗಿತ್ತು. 5 ದಿನಗಳ ಕಾಲ ನಡೆದ ಶಿಬಿರದಲ್ಲಿ ಪ್ರತಿ ದಿನ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಹಾವು-ನಾವು-ಪರಿಸರ ಎಂಬ ವಿಷಯದ ಕುರಿತಾಗಿ ಉರಗ ತಜ್ಞ ರವೀಂದ್ರನಾಥ ಐತಾಳ ಕಾರ್ಯಕ್ರಮ ವನ್ನು ನಡೆಸಿಕೊಟ್ಟರು. ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ಎನ್.ಎಂ.ಸಿ ಕಾಲೇಜಿನ ಉಪನ್ಯಾಸಕಿ ಡಾ.ಅನುರಾಧ ಕುರುಂಜಿ ವಹಿಸಿ ಮಾತನಾಡಿ; ಇಂದಿನ ದಿನಗಳಲ್ಲಿ ಬೇಸಿಗೆ ಶಿಬಿರಗಳು ಹಣ ಮಾಡುವ ದಾರಿಯಾಗಿದ್ದರೆ ಪಯಸ್ವಿನಿ ಬಳಗ ಪೆರಾಜೆ ವತಿಯಿಂದ ಉಚಿತ ಕಾರ್ಯವಾಗಿದೆ ಎಂದು ಶ್ಲಾಘಿಸಿದರು. ವೇದಿಕೆಯಲ್ಲಿ ಪಯಸ್ವಿನಿ ಬಳಗ ಪರಾಜೆಯ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಗೌರವ ಸಲಹೆಗಾರ ಡಾ. ಮಾಧವ ಪೆರಾಜೆ , ಜ್ಯೋತಿ ಪ್ರೌಢ ಶಾಲೆಯ ಅಧ್ಯಾಪಕಿ ಚಂದ್ರಮತಿ ಹಾಗೂ ಮೋಹನಾಂಗಿ ಹಾಗೂ ಪಂಚಾಯತಿಯ ಅಧ್ಯಕ್ಷೆ ಜಯಲಕ್ಷ್ಮಿ ಧರಣೀಧÀರ ಉಪಸ್ಥಿತರಿದ್ದರು. ಸುಧಾಮ ಪೆರಾಜೆ ಕಾರ್ಯಕ್ರಮವನ್ನು ನಿರೂಪಿಸಿದರೆ, ದರ್ಶನ್ ವಂದಿಸಿದರು.