ವೀರಾಜಪೇಟೆ, ಏ : 8 ವೀರಾಜಪೇಟೆಯ ಮಗ್ಗುಲ ಗ್ರಾಮದಲ್ಲಿರುವ ಕೊಡಗು ದಂತ ಮಹಾವೈದ್ಯಕೀಯ ಕಾಲೇಜು ಕೇವಲ ಅತ್ಯಲ್ಪ ಸಮಯದಲ್ಲಿಯೇ ದಂತ ವೈದ್ಯಕೀಯ ಶಿಕ್ಷಣದಲ್ಲಿ ಸಾಧನೆಯನ್ನು ಮಾಡಿದೆ. ಇಂದಿನ ಸಮಾಜಕ್ಕೆ ದಂತ ವೈದ್ಯರ ಕೊಡುಗೆ ಕಂಡಿದೆ ಎಂದು ನವದೆಹಲಿಯ ಭಾರತ ದಂತ ಪರಿಷತ್‍ನ ಸದಸ್ಯ ಡಾ. ಅನಿಲ್ ಕುಮಾರ್ ಹೇಳಿದರು.
ಕೊಡಗು ದಂತ ವೈದ್ಯಕೀಯ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾಲೇಜಿನ 20ನೇ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅವರು ಭಾರತದಲ್ಲಿ ದಂತ ವೈದ್ಯಕೀಯ ವೃತ್ತಿ ಆರಂಭದಿಂದ ಇಂದಿನ ಬೆಳವಣಿಗೆವರೆಗೆ ಮಾತನಾಡಿದರು. ಕಾಲೇಜಿನ ಡೀನ್ ಡಾ:ಸುನಿಲ್ ಮುದ್ದಯ್ಯ ಮಾತನಾಡಿ ಕಳೆದ ಇಪ್ಪತ್ತು ವರ್ಷಗಳ ಅವಧಿಯಲ್ಲಿ ನಡೆದು ಬಂದ ದಾರಿಯ ಕುರಿತು ವಿವರಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ: ಕೆ. ಸಿ. ಪೊನ್ನಪ್ಪ ವಾರ್ಷಿಕ ವರದಿ ಓದಿದರು. ಕ್ರೀಡಾ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ವಿಜೇತರಾದವರಿಗೆ ಅತಿಥಿಗಳು ಬಹುಮಾನಗಳನ್ನು ವಿತರಿಸಿದರು.
ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಸಿತಾರ ಸುಬ್ಬಯ್ಯ ಸ್ವಾಗತಿಸಿದರು. ಕಾರ್ಯದರ್ಶಿ ಶ್ವೇತ ಲೆಸ್ಲಿ ವಂದಿಸಿದರು. ಸಮಾರಂಭದ ನಂತರ ಕಾಲೇಜಿನ ವಿದ್ಯಾರ್ಥಿ ಹಾಗೂ ಶಿಕ್ಷಕ ವೃಂದದವರಿಂದ ಸಾಂಸ್ಕøತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.