ಮಡಿಕೇರಿ, ಏ. 8: ಸಿಕ್ಕ ಸಿಕ್ಕ ಮಂದಿಯಿಂದ ಸಾಲ ಪಡೆದಿದ್ದ ವ್ಯಕ್ತಿಯೋರ್ವ ಹಿಂತಿರುಗಿಸಲು ಕೇಳಿದ ಸಂದರ್ಭ ಊರಿನ ನಡುವೆ ಅಂಬಲದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಸಂಗ ತಡವಾಗಿ ಬೆಳಕಿಗೆ ಬಂದಿದೆ. ಬಲ್ಲಮಾವಟಿಯ ಕೋಟೇರ ನಾಣಯ್ಯ (63) ಎಂಬವರು ಮಾ. 28 ರಂದು ಮದ್ಯದೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆ ಮುನ್ನ ತಮ್ಮ ಪತ್ನಿಗೆ ಕರೆ ಮಾಡಿ ‘ತಾನು ಹೋಗುವೆ’ ಎಂದು ಸಂದೇಶ ರವಾನಿಸಿದ್ದಾರೆ. ಗ್ರಾಮಸ್ಥರು ಅಂಬಲದತ್ತ ಬರುವ ವೇಳೆ ನಾಣಯ್ಯ ಜೀವನ್ಮರಣ ಸ್ಥಿತಿಯಲ್ಲಿದ್ದು, ಆಸ್ಪತ್ರೆಗೆ ಕೊಂಡೊಯ್ಯುವಷ್ಟರಲ್ಲಿ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.