ಗುಡ್ಡೆಹೊಸೂರು, ಏ. 8: ಇಲ್ಲಿನ ಹೆದ್ದಾರಿ ಬಳಿ ಸುಣ್ಣದಕೆರೆ ಗ್ರಾಮದ ಕ್ರಾಸ್ ಸಮೀಪ ಕಾರು ಮತ್ತು ಬೈಕ್ ನಡುವೆ ಡಿಕ್ಕಿಯಾಗಿ ಗುಡ್ಡೆಹೊಸೂರು ಬೊಳ್ಳುರು ಸುಣ್ಣದ ಕೆರೆ ಗ್ರಾಮದ ವಿವಾಸಿ ಸೋಮಯ್ಯ ಅವರ ಪುತ್ರ ದೇವಯ್ಯ (40) ಮತ್ತು ಹಾವೇರಿಯ ನಿವಾಸಿ ರಸ್ತೆ ಡಾಮರೀಕರಣದ ಕಾರ್ವಿಕ ಮಂಜು (35) ಎಂಬವರಗಳು ಗಂಭೀರ ಗಾಯಗೊಂಡಿದ್ದಾರೆ. ದೇವಯ್ಯ ಮತ್ತು ಮಂಜು ಇವರುಗಳು ಕುಶಾಲನಗರ ದಿಂದ ಬೈಕ್ನಲ್ಲಿ ತೆರಳುತ್ತಿ ದ್ದರು. ದೇವಯ್ಯ ಮದ್ಯವ್ಯಸನಿ ಯಾಗಿದ್ದು, ಕುಡಿದಿದ್ದ ಕಾರಣಕ್ಕೆ ದೇವಯ್ಯನನ್ನು ಮನೆಗೆ ಬಿಟ್ಟು ಬರುವ ಸಂದರ್ಭ ಈ ಘಟನೆ ನಡೆದಿದೆ.ಪುತ್ತೂರು ಸಮೀಪದ ವಿಟ್ಲದ ದಂಪತಿಗಳು ತಮ್ಮ ಕಾರು (ಕೆ.ಎ.09 ಎಂ.ಡಿ.4468)ನಲ್ಲಿ ಮಡಿಕೇರಿ ಕಡೆಯಿಂದ ಮೈಸೂರಿಗೆ ತೆರಳುತ್ತಿದ್ದರು. ಈ ಸಂದರ್ಭ ರಸ್ತೆ (ಮೊದಲ ಪುಟದಿಂದ) ಬದಿಯಲ್ಲಿ ಬೈಕ್ ನಿಲ್ಲಿಸಿಕೊಂಡಿದ್ದವರು ದಿಢೀರನೆ ಬೈಕ್ ಅನ್ನು ರಸ್ತೆಯ ಬಲಬದಿಗೆ ತಿರುಗಿಸಿದ್ದರಿಂದ ಕಾರಿಗೆ ಡಿಕ್ಕಿಯಾಗಿದೆ. ಮಂಜುವಿನ ಅಜಾಗರುಕತೆಯ ಚಾಲನೆ ಈ ಘಟನೆಗೆ ಕಾರಣವಾಗಿದೆ. ಕಾರಿನಲ್ಲಿದ್ದ ಚಿಕ್ಕ ಮಗುವಿಗೆ ಸಣ್ಣಪುಟ್ಟ ಗಾಯವಾಗಿದೆ. ಸಿನಿಮಾ ಶೂಟಿಂಗ್ ಶೈಲಿಯಲ್ಲಿ ನಡೆದುಹೋಗಿದೆ. ಕಾರು ಬೈಕ್ಗೆ ಅಪ್ಪಳಿಸಿದ ಸಂದರ್ಭ ಸುಮಾರು 10ಅಡಿಗಳ ಎತ್ತರಕ್ಕೆ ಬೈಕ್ ಮತ್ತು ಸವಾರರು ಹಾರಿ ರಸ್ತೆ ಬದಿಯ ಚರಂಡಿಯಲ್ಲಿ ಬೈಕ್ ಮುದ್ದೆಯಾಗಿ ಬಿದ್ದರೆ, ಸವಾರರು ಪ್ರಜ್ಞೆ ತಪ್ಪಿ ಬಿದ್ದಿದ್ದರು. ದೇವಯ್ಯನ ಎರಡು ಕಾಲು ಮುರಿದಿದ್ದು ಮಂಜುವಿನ ಕಾಲು ಮುರಿದಿದೆ. ಇವರನ್ನು ಸ್ಥಳೀಯರ ಸಹಕಾರದೊಂದಿಗೆ ಮಂಗಳೂರಿನ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- ಗಣೇಶ್ ಕುಡೆಕ್ಕಲ್, ಸಿಂಚು