ಮಡಿಕೇರಿ, ಏ.7: ಮೈಸೂರು-ಕೊಡಗು ಲೋಕಸಭಾ ಚುನಾವಣೆ ಸಂಬಂಧ ಕರ್ತವ್ಯಕ್ಕೆ ನಿಯೋಜನೆ ಗೊಳ್ಳುವ ವಾಹನ ಚಾಲಕರಿಗೆ ಕರ್ತವ್ಯನಿರತ ಸ್ಥಳದಲ್ಲಿ ಮತದಾನ ಮಾಡಲು ಅವಕಾಶವಾಗುವಂತೆ, ನಮೂನೆ 12 ಮತ್ತು 12ಎ ಮಡಿಕೇರಿ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ನೀಡಲಾಗುತ್ತಿದೆ.
ನಿಯೋಜನೆಗೊಳ್ಳುವ ಖಾಸಗಿ ವಾಹನ ಚಾಲಕರು ತಮಗೆ ನೀಡಿರುವ ವಾಹನ ಅಧಿಗ್ರಹಣ ಆದೇಶದ ಪ್ರತಿ ಹಾಗೂ ಚುನಾವಣಾ ಗುರುತಿನ ಪ್ರತಿ ಹಾಗೂ ನಮೂನೆ 12ಎ ನ್ನು ತಕ್ಷಣ ಸಲ್ಲಿಸಿದ್ದಲ್ಲಿ ಚುನಾವಣಾ ಕರ್ತವ್ಯ ಪ್ರಮಾಣ ಪತ್ರ ಒದಗಿಸಲು ಕ್ರಮವಹಿಸಲಾಗುವದು. ಚುನಾವಣಾ ಕರ್ತವ್ಯಕ್ಕೆ ನಿಯೋಜಿತ ವಾಹನ ಚಾಲಕರು ಇದರ ಸದುಪಯೋಗ ಪಡಿಸಿಕೊಂಡು ತಮ್ಮ ಮತದಾನದ ಹಕ್ಕು ಚಲಾಯಿಸಬಹುದು ಎಂದು ಮಡಿಕೇರಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಅವರು ತಿಳಿಸಿದ್ದಾರೆ.