ಮಡಿಕೇರಿ, ಏ. 7: ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾದ ಮೂರು ಕುಟುಂಬಗಳಿಗೆ ಮೈತಾಡಿ ಗ್ರಾಮದ ಐಚೆಟ್ಟಿರ ಕುಟುಂಬದ ವತಿಯಿಂದ ಆರ್ಥಿಕ ನೆರವು ನೀಡಲಾಯಿತು.

ಸಂತ್ರಸ್ತರಾದ ಇಗ್ಗೋಡ್ಲುವಿನ ಜಗ್ಗಾರಂಡ ಪಿ. ಕಾವೇರಪ್ಪ, ಮೂವತ್ತೊಕ್ಲುವಿನ ಮಂಡೀರ ತಾರಾ ಪೂವಯ್ಯ, ಶಿರಂಗಳ್ಳಿಯ ಉಡುವೇರ ಲೋಕೇಶ್ ಇವರುಗಳಿಗೆ ‘ಶಕ್ತಿ’ ಕಚೇರಿಯಲ್ಲಿ ಸಂಪಾದಕರಾದ ಜಿ. ಚಿದ್ವಿಲಾಸ್ ಅವರ ಸಮ್ಮುಖದಲ್ಲಿ ತಲಾ 10 ಸಾವಿರ ರೂ.ನಂತೆ ಐಚೆಟ್ಟಿರ ಕುಟುಂಬಸ್ಥರು ನೆರವು ನೀಡಿದರು.

ಈ ಸಂದರ್ಭ ಕುಟುಂಬದ ಅಧ್ಯಕ್ಷ ಐಚೆಟ್ಟಿರ ಅಪ್ಪಚ್ಚು, ಕಾರ್ಯದರ್ಶಿ ಐಚೆಟ್ಟಿರ ತಿಮ್ಮಯ್ಯ, ಪದಾಧಿಕಾರಿಗಳಾದ ಐ.ಪಿ. ಮೋಹನ್, ಅಚ್ಚಯ್ಯ, ಅರುಣ್, ಸುರೇಶ್, ನಂಜಪ್ಪ, ಐ.ಎಂ. ಮೋಹನ್ ಮತ್ತಿತರರಿದ್ದರು.