ಸೋಮವಾರಪೇಟೆ, ಏ. 7: ಪಟ್ಟಣ ಸಮೀಪದ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಆರೋಪದ ಮೇರೆ ಪೊಲೀಸರು ದಾಳಿ ನಡೆಸಿ, ಈರ್ವರನ್ನು ಬಂಧಿಸಿರುವ ಘಟನೆ ಯುಗಾದಿ ಹಬ್ಬದ ರಾತ್ರಿ ನಡೆದಿದೆ.ಸೋಮವಾರಪೇಟೆ ಪಟ್ಟಣ ಸಮೀಪದ ನೂತನ ಮನೆಯೊಂದರಲ್ಲಿ ಬೆಂಗಳೂರಿನಿಂದ ಆಗಮಿಸಿದ ಕೆಲವರು ನಿನ್ನೆ ರಾತ್ರಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದರು ಎನ್ನಲಾಗಿದ್ದು, ರಾತ್ರಿ 10.30ರ ಸುಮಾರಿಗೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ಸಂದರ್ಭ ಬೆಂಗಳೂರು ಮೂಲದ ಈರ್ವರು ಮಹಿಳೆಯರು ಕಂಡುಬಂದಿದ್ದು, ಅವರನ್ನು ಮಡಿಕೇರಿಯ ಸಾಂತ್ವಾನ ಕೇಂದ್ರಕ್ಕೆ ಕಳುಹಿಸಲಾಗಿದೆ.ಆರೋಪಿಗಳಾದ ಬೆಂಗಳೂರಿನ ಮುನಿರಾಜು ಮತ್ತು ಬಿಜೇಶ್ ಅವರುಗಳನ್ನು ವಶಕ್ಕೆ ಪಡೆದು, ಮೊಕದ್ದಮೆ ದಾಖಲಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ ಮೇರೆ, ನ್ಯಾಯಾಧೀಶರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಮನೆಯ ಮಾಲೀಕರು ಹೊರಭಾಗದಲ್ಲಿ ನೆಲೆಸಿದ್ದು, ಅವರಿಗೆ ತಪ್ಪು ಮಾಹಿತಿ ನೀಡಿ ಈ ಕೃತ್ಯ ಎಸಗಿರುವದಾಗಿ ತಿಳಿದುಬಂದಿದೆ.

ಡಿವೈಎಸ್‍ಪಿ ದಿನಕರ್‍ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪೊಲೀಸ್ ವೃತ್ತ ನಿರೀಕ್ಷಕ

(ಮೊದಲ ಪುಟದಿಂದ) ನಂಜುಂಡೇಗೌಡ, ಠಾಣಾಧಿಕಾರಿ ಶಿವಶಂಕರ್, ಪ್ರೊಬೇಷನರಿ ಠಾಣಾಧಿಕಾರಿ ಮೋಹನ್‍ರಾಜ್, ಪೊಲೀಸ್ ಪೇದೆಗಳಾದ ಜಗದೀಶ್, ಪ್ರವೀಣ್, ಶಿವಕುಮಾರ್, ಧನಲಕ್ಷ್ಮೀ, ವಾಸಂತಿ, ಮಧು, ನವೀನ್, ಕೇಶವ ಅವರುಗಳು ಭಾಗವಹಿಸಿದ್ದರು.