ವೀರಾಜಪೇಟೆ, ಏ. 7: ವೀರಾಜಪೇಟೆಯ ಸಿದ್ದಾಪುರ ರಸ್ತೆಯ ಮಗ್ಗುಲ ಗ್ರಾಮದ ಬಳಿ ಹುಲ್ಲು ತುಂಬಿದ್ದ (ಕೆ.ಎಲ್.13 ಸಿ.7630) ಲಾರಿಗೆ ಯಾರೋ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಪರಿಣಾಮ ಲಾರಿಯಲ್ಲಿದ್ದ ಸುಮಾರು 1500 ಹುಲ್ಲಿನ ಕಂತೆಗಳು ಭಸ್ಮಗೊಂಡಿದ್ದು, ಲಾರಿಯ ಹಿಂಬದಿ ಭಾಗಶಃ ಜಖಂಗೊಂಡು ರೂ. ಎರಡು ಲಕ್ಷ ನಷ್ಟ ಸಂಭವಿಸಿದೆ. ಕೇರಳದ ತಲಚೇರಿ ಬಳಿಯ(ಮೊದಲ ಪುಟದಿಂದ) ತಳ್ಳಿಪರಂಬಿಗೆ ತೆರಳುತ್ತಿದ್ದ ಲಾರಿ ಬಿಳುಗುಂದ ಗ್ರಾಮದಿಂದ ಹುಲ್ಲು ತುಂಬಿಸಿಕೊಂಡು ಸುಮಾರು ರಾತ್ರಿ 11-15ರ ಸಮಯದಲ್ಲಿ ಮಗ್ಗುಲ ಗ್ರಾಮದಲ್ಲಿ ಮುಖ್ಯ ರಸ್ತೆಯಲ್ಲಿ ತೆರಳುತ್ತಿದ್ದಾಗ ಲಾರಿಯ ಹಿಂಬದಿಯಿಂದ ಬೈಕ್‍ನಲ್ಲಿ ಬಂದ ಇಬ್ಬರು ಬೆಂಕಿ ಕೊಟ್ಟು ತಲೆಮರೆಸಿಕೊಂಡರೆಂದು ಲಾರಿಯ ಚಾಲಕ ರಂಜು ತಿಳಿಸಿದ್ದಾನೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ಹುಲ್ಲು ಲಾರಿಗೆ ಬೆಂಕಿ ಕೊಡುವ ಅನೇಕ ಪ್ರಕರಣಗಳು ನಡೆದಿವೆ. ಆದರೆ ಪೊಲೀಸರು ಈ ತನಕ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚದಿರುವದರಿಂದ ಮತ್ತೆ ದುಷ್ಕøತ್ಯ ಮರುಕಳಿಸುತ್ತಿದೆ. ಇದರಿಂದ ರೈತರು, ವ್ಯಾಪಾರಿಗಳು ಸಂಕಷ್ಟವನ್ನು ಎದುರಿಸುವಂತಾಗಿದೆ ಎಂದು ಒಣ ಹುಲ್ಲು ವ್ಯಾಪಾರಿಗಳ ಸಂಘದ ಅಧ್ಯಕ್ಷ ನೆಲ್ಲಮಕ್ಕಡ ಶಿವಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಲಾರಿ ಕೇರಳದ ತಳ್ಳಿಪರಂಬಿನ ಬೆನ್ನಿ ಎಂಬವರಿಗೆ ಸೇರಿದ್ದು ಎನ್ನಲಾಗಿದೆ.