ಸಿದ್ದಾಪುರ, ಏ. 7: ಯುಗದಿ ಹಬ್ಬದ ಪ್ರಯುಕ್ತ ನಡೆಯುತ್ತಿದ್ದ ಕ್ರೀಡಾ ಕಾರ್ಯಕ್ರಮದಲ್ಲಿ ಗ್ರಾಮದ ಯುವಕರ ನಡುವೆ ಕಲಹ ಏರ್ಪಡುತ್ತಿದ್ದ ಸಂಧರ್ಭದಲ್ಲಿ ಕಲಹ &divound;ಯಂತ್ರಿಸಲು ತೆರಳಿದ ಪೊಲೀಸ್ ಸಿಬ್ಬಂದಿಯೋರ್ವರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಗ್ರಾಮದ ಈರ್ವರು ಯುವಕರನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡ ಘಟನೆ ಸಿದ್ದಾಪುರ ಸಮೀಪದ ಚೆನ್ನಯ್ಯನಕೋಟೆಯಲ್ಲಿ ನಡೆದಿದೆ.ಯುಗಾದಿ ಹಬ್ಬದ ಪ್ರಯುಕ್ತ ಚೆನ್ನಯ್ಯನಕೋಟೆಯಲ್ಲಿ ಗ್ರಾಮಸ್ಥರು ಸೇರಿ ವಿವಿಧ ಕ್ರೀಡಾ ಕೂಟವನ್ನು ಆಯೋಜಿಸಿದ್ದರು.ಕ್ರೀಡಾಕೂಟದ ಅಂಗವಾಗಿ ರಮೇಶ್ ಮತ್ತು ದಿನೇಶ್ ಎಂಬವರು ತೆಂಗಿನ ಕಾಯಿಗೆ ಕಲ್ಲು ಎಸೆಯುವ ಸ್ಪರ್ಧೆಯನ್ನು ಮುಖ್ಯ ರಸ್ತೆಯಲ್ಲೇ ನಡೆಸುತ್ತಿದ್ದ ಸಂದರ್ಭ, ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಅಡಚಣೆ ಯುಂಟಾಗಿದ್ದು,(ಮೊದಲ ಪುಟದಿಂದ) ಕೆಲ ಗ್ರಾಮಸ್ಥರು ವಿಷಯವನ್ನು ಚೆನ್ನಯ್ಯನಕೋಟೆ ಉಪ ಪೊಲೀಸ್ ಠಾಣೆಗೆ ಮಾಹಿತಿ &divound;ೀಡಿದ ಹಿನ್ನೆಲೆಯಲ್ಲಿ, ಸ್ಥಳಕ್ಕೆ ಆಗಮಿಸಿದ ಪೊಲೀಸ್ ಸಿಬ್ಬಂದಿ ಭರತ್ ಹಾಗೂ ಸಂತೋಷ್ ಯುವಕರನ್ನು ಪ್ರಶ್ನಿಸಿದ್ದಾರೆ. ಈ ಸಂದರ್ಭ ಚೆನ್ನಯ್ಯನಕೋಟೆ ಗ್ರಾಮದ ಯುವಕರಾದ ದಿನೇಶ್ ಹಾಗೂ ರಮೇಶ್ ಕರ್ತವ್ಯದಲ್ಲಿದ್ದ ಸಿಬ್ಬಂದಿಗಳನ್ನು ಅವಾಚ್ಯ ಶಬ್ದದಿಂದ &divound;ಂದಿಸಿ, ಕರ್ತವ್ಯಕ್ಕೆ ಅಡ್ಡಿ ಪಡಿಸಿದರು ಎನ್ನಲಾಗಿದೆ. ಈ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಈರ್ವರನ್ನು ಬಂಧಿಸಿ ನ್ಯಾಯಾದೀಶರ ಎದುರು ಹಾಜರಿಪಡಿಸಿ, ಮುಂದಿನ ಕ್ರಮಕೈಗೊಂಡಿದ್ದಾರೆ.