ವೀರಾಜಪೇಟೆ, ಏ. 7: ವೀರಾಜಪೇಟೆಯ ಆರ್ಜಿ ಗ್ರಾಮದ ಕಂಡಿಮಕ್ಕಿ ಮೂರ್ತಿ ದೇವರ ವಾರ್ಷಿಕ ತೆರೆ ವiಹೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಮೂರು ದಿನಗಳ ಕಾಲ ನಡೆದ ತೆರೆಗಳು ಹಾಗೂ ದರ್ಶನವು ದೇವಾಲಯಯಕ್ಕೆ ಆಗಮಿಸಿದ ಭಕ್ತರಿಗೆ ಶ್ರೀ ಹಸ್ತ ನೀಡಿ ಹರಸಲಾಯಿತು. ದೇಗುಲದ ಆಡಳಿತ ಮಂಡಳಿಯ ವತಿಯಿಂದ ಆಗಮಿಸಿದ ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಯಿತು. ಗ್ರಾಮಸ್ಥರು ಅಲ್ಲದೆ ಇತರ ಕಡೆಗಳಿಂದ ಭಕ್ತರು ಆಗಮಿಸಿದ್ದರು.