ಸೋಮವಾರಪೇಟೆ, ಏ. 7: ಸಮೀಪದ ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಳ್ಳಿ ಗ್ರಾಮಸ್ಥರು ಉತ್ತಮ ಮಳೆಗಾಗಿ ಮದಲಾಪುರದ ಹೊಳೆ ಬಸವೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಗ್ರಾಮಸ್ಥರು ಸಾಮೂಹಿಕವಾಗಿ ದೇವಾಲಯಕ್ಕೆ ತೆರಳಿ ಹಣ್ಣುಕಾಯಿ, ನೈವೇದ್ಯ ಮಾಡಿಸಿದರಲ್ಲದೇ, ಉತ್ತಮ ಮಳೆಯಾಗಿ ಕೃಷಿ ಚಟುವಟಿಕೆಗೆ ಅನುಕೂಲ ಕಲ್ಪಿಸುವಂತೆ ದೇವರಲ್ಲಿ ಪ್ರಾರ್ಥಿಸಿದರು.
ಪ್ರಮುಖರಾದ ಲೋಕೇಶ್, ಪ್ರಮೋದ್, ಕೃಷ್ಣಪ್ಪ, ರಾಜೇಶ್ ಸೇರಿದಂತೆ 50ಕ್ಕೂ ಅಧಿಕ ಮಂದಿ ಗ್ರಾಮಸ್ಥರು ಈ ಸಂದರ್ಭ ಉಪಸ್ಥಿತರಿದ್ದರು.