ಗುಡ್ಡೆಹೊಸೂರು, ಏ. 5: ಇಲ್ಲಿನ ರಾಜ್ಯಹೆದ್ದಾರಿಯಲ್ಲಿ ಹಾರಂಗಿ ತಿರುವಿನ ಬಳಿ ಲಾರಿ ಮತ್ತು ಬೈಕ್‍ನ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸತೀಶ್ ಎಂಬವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮತ್ತೊಬ್ಬರನ್ನು ಮೈಸೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಮಡಿಕೇರಿ ಕಡೆಯಿಂದ ಕುಶಾಲನಗರ ಕಡೆ ಸಂಚರಿಸುತ್ತಿದ್ದ ಲಾರಿ (ಕೆ.ಎ.12-8935) ಕುಶಾಲನಗರ ಕಡೆಯಿಂದ ಮಡಿಕೇರಿಯತ್ತ ಬರುತ್ತಿದ್ದ ಬೈಕ್‍ಗೆ ಡಿಕ್ಕಿಯಾಗಿದೆ. ಪರಿಣಾಮ ಸವಾರ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾನೆ.

ಈತ ಹುಣಸೂರು ಬಳಿಯ ನಾಗಪುರ ನಿವಾಸಿ ಎಂದು ಗೊತ್ತಾಗಿದೆ. ಗಾಯಾಳು ಬಗ್ಗೆ ನಿಖರ ಮಾಹಿತಿ ಲಭಿಸಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ. ಗುಡ್ಡೆಹೊಸೂರಿನ ಗ್ರಾಮಸ್ಥರಾದ ಶಶಿ ಮತ್ತು ಗಣೇಶ್ ಎಂಬವರು ಅವರನ್ನು ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಶಾಲನಗರದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.