ಮಡಿಕೇರಿ, ಏ. 5: ಬೆಂಗಳೂರು ಕೊಡವ ಸಮಾಜದ ವತಿಯಿಂದ ಅಲ್ಲಿನ ಎಎಸ್‍ಸಿ ಸೆಂಟರ್‍ನಲ್ಲಿರುವ ಯುದ್ಧ ಸ್ಮಾರಕದಲ್ಲಿ ವೀರ ಸೇನಾನಿ ಪದ್ಮಭೂಷಣ ಜನರಲ್ ಕೆ.ಎಸ್. ತಿಮ್ಮಯ್ಯ ಅವರ 113ನೇ ಜನ್ಮದಿನಾಚರಣೆಯನ್ನು ಭಾನುವಾರ ದಂದು ಆಚರಿಸಲಾಯಿತು.

ಸಮಾಜದ ಅಧ್ಯಕ್ಷ ಮುಕ್ಕಾಟಿರ ಟಿ. ನಾಣಯ್ಯ, ಉಪಾಧ್ಯಕ್ಷೆ ಮಲ್ಲೇಂಗಡ ಮೀರಾ ಜಲಜಕುಮಾರ್, ಕಾರ್ಯದರ್ಶಿ ಚಿರಿಯಪಂಡ ಸುರೇಶ್ ನಂಜಪ್ಪ, ಸಹಕಾರ್ಯದರ್ಶಿ ಕೊಕ್ಕಲೆರ ಕುಟ್ಟಪ್ಪ, ಖಜಾಂಚಿ ಉಳ್ಳಿಯಡ ಎಂ. ಅಯ್ಯಪ್ಪ ಮತ್ತಿತರರು ಪಾಲ್ಗೊಂಡಿದ್ದರು.

ನಿವೃತ್ತ ಸೇನಾಧಿಕಾರಿಗಳು, ಎಎಸ್‍ಸಿಯ ಪ್ರಮುಖರು ಸೇರಿದಂತೆ ಕರ್ನಾಟಕ, ಕೇರಳ ಸಬ್ ಏರಿಯಾದ ಅಧಿಕಾರಿಗಳು, ಸಿಬ್ಬಂದಿಗಳು ಸೇರಿ ತಿಮ್ಮಯ್ಯ ಪ್ರತಿಮೆಗೆ ಮಾಲಾರ್ಪಣೆಯೊಂದಿಗೆ ಗೌರವ ನಮನ ಸಲ್ಲಿಸಿದರು.