ಚಯ್ಯಂಡಾಣೆ, ಏ. 5: ಕಡಿಯತ್ತುನಾಡು ಚೇಲಾವರ ಗ್ರಾಮದ ಪೊನ್ನೋಲ ಶಾಸ್ತಾವು ಬಯತ್ತೂರು ದೇವರ ವಾರ್ಷಿಕ ಉತ್ಸವ ಹಾಗೂ ಪುದಿಯೋದಿ ತೆರೆ ತಾ. 14 ರಿಂದ 18ರವರೆಗೆ ನಡೆಯಲಿದೆ.
14ರ ಬೆಳಿಗ್ಗೆ 9 ಗಂಟೆಗೆ ದೇವತಕ್ಕರ ಮನೆಯಿಂದ ಭಂಡಾರ ಬರುವದು, 10 ಗಂಟೆಗೆ ಎತ್ತು ಪೋರಾಟ, 12.30ಕ್ಕೆ ಮಹಾಪೂಜೆ, 1 ಗಂಟೆಗೆ ಅನ್ನದಾನವಿರುತ್ತದೆ. ಸಂಜೆ 7 ರಿಂದ ಅಂದಿಬೆಳಕು, ಕಲಶಪೂಜೆ, ತಾ. 15 ರಂದು ಬೆಳಿಗ್ಗೆ 5 ಕ್ಕೆ ಕಣಿಪೂಜೆ, 12ಕ್ಕೆ ಮಹಾಪೂಜೆ, ಅನ್ನದಾನ, 3 ಗಂಟೆಗೆ ವರ್ಷದ ಮೊದಲ ಪೂಜೆ ನಡೆಯಲಿದೆ. ತಾ. 17 ರ ಸಂಜೆ 8 ಗಂಟೆಗೆ ಭಂಡಾರ ತರುವದರೊಂದಿಗೆ ತೋತ ತೆರೆ, ಬೀರಾಳಿ ತೆರೆ, ತಾ. 18ಕ್ಕೆ ಬೆಳಗ್ಗಿನ ಜಾವ 4 ಗಂಟೆಗೆ ಪುದಿಯೋದಿ ತೆರೆ, 6 ಗಂಟೆಗೆ ಭದ್ರಕಾಳಿ ತೆರೆ, 9 ಗಂಟೆಗೆ ದೇವತಕ್ಕರ ಮನೆಗೆ ಭಂಡಾರ ಹೋಗುವದೆಂದು ಪ್ರಕಟಣೆ ತಿಳಿಸಿದೆ.