ಮಡಿಕೇರಿ, ಏ. 5: ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ವಿ.ಸಿ.ವಿ. ಶಂಕರ್ ಅವರ ಜ್ಞಾಪಕಾರ್ಥ ನಡೆಯುತ್ತಿರುವ ಉಚಿತ ಬೇಸಿಗೆ ಶಿಬಿರದಲ್ಲಿ ಚಿತ್ರಕಲೆ ಹಾಗೂ ಕೈಬರಹ ತರಬೇತಿ ನೀಡಲಾಗುತ್ತದೆ. ಶಿಬಿರದಲ್ಲಿ ಯೋಗ, ವ್ಯಾಯಾಮ, ಕ್ರೀಡೆ, ಹಾಕಿ ತರಬೇತಿಯೊಂದಿಗೆ ಉತ್ತಮ ಮಾಹಿತಿಗಳನ್ನು ನೀಡಲಾಗುತ್ತಿದ್ದು, ಇದರೊಂದಿಗೆ ಚಿತ್ರಕಲೆ ಹಾಗೂ ಕೈಬರಹದ ತರಬೇತಿ ಕೂಡ ಉಚಿತವಾಗಿ ನೀಡಲಾಗುತ್ತಿದೆ. ಬೆಳಿಗ್ಗೆ 6.30 ರಿಂದ 8.30 ರವರೆಗೆ ಶಿಬಿರ ನಡೆಯಲಿದೆ.