ಮಡಿಕೇರಿ ಏ.5 :ಕೊಡಗು ಗೌಡ ಯುವ ವೇದಿಕೆ ವತಿಯಿಂದ 10 ಕುಟುಂಬ 18 ಗೋತ್ರದ ಗೌಡ ಜನಾಂಗÀ ಬಾಂಧವರ ನಡುವೆ ಪ್ರತಿ ವರ್ಷ ನಡೆಸಲಾಗುವ ಕ್ರಿಕೆಟ್ ಪಂದ್ಯಾವಳಿಯನ್ನು ತಾ. 26 ರಿಂದ 28 ರವರೆಗೆ ನಡೆಸಲಾಗುವದೆಂದು ವೇದಿಕೆಯ ಪದಾಧಿಕಾರಿಗಳು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ವೇದಿಕೆಯ ನಿರ್ದೇಶಕ ಪುದಿಯನೆರವನ ರಿಷಿತ್ ಮಾದಯ್ಯ ಅವರು, ಕಳೆದ ಆಗಸ್ಟ್ ತಿಂಗಳಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪಕ್ಕೆ ಗೌಡ ಜನಾಂಗದ ಹಲವಾರು ಕುಟುಂಬಗಳು ನೋವನ್ನು ಅನುಭವಿಸಿದ್ದು, ಸಾಕಷ್ಟು ಹಾನಿಯು ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಕ್ರಿಕೆಟ್ ಹಬ್ಬದ ಸಂಭ್ರಮಾಚರಣೆÉಯನ್ನು ರದ್ದುಗೊಳಿಸಿ 32 ತಂಡಗಳಿಗೆ ಸೀಮಿತಗೊಳಿಸಿ ಸರಳವಾಗಿ ಪಂದ್ಯಾವಳಿ ಆಯೋಜಿಸ ುವಂತೆ ತೀರ್ಮಾನಿಸಲಾಗಿದೆ ಎಂದರು.

ತಲಾ 8 ಓವರ್‍ಗಳ ಪಂದ್ಯಾವಳಿಯನ್ನು ನಡೆಸಲು ಉದ್ದೇಶಿಸಲಾಗಿದ್ದು, ಮೊದಲು ನೋಂದಾಯಿಸಲ್ಪಡುವ 32 ಕುಟುಂಬ ತಂಡಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ಮೊದಲ ನಾಲ್ಕು ಸ್ಥಾನಗಳಿಸುವ ತಂಡಗಳಿಗೆ ಆಕರ್ಷಕ ಟ್ರೋಫಿ ಮತ್ತು ನಗದು ಬಹುಮಾನ ಅಲ್ಲದೆ, ಉತ್ತಮ ಆಟಗಾರರಿಗೆ ಮತ್ತು ತಂಡಕ್ಕೆ ವಿಶೇಷ ಬಹುಮಾನಗಳನ್ನು ನೀಡಲಾಗುವದೆಂದು ತಿಳಿಸಿದರು. ಪಂದ್ಯಾವಳಿಗೆ ಹೆಸರು ನೋಂದಾಯಿಸಲು ತಾ. 19 ಕೊನೆಯ ದಿನವಾಗಿದ್ದು, ತಾ. 20 ರಂದು ಟೈಸ್ ಡ್ರಾ ಮಾಡಲಾಗುವದು. ಭಾಗವಹಿಸಲಿಚ್ಛಿಸುವ ಕುಟುಂಬ ತಂಡಗಳು ಅಚ್ಚಲ್ಪಾಡಿ ಪ್ರಸಾದ್ ಅವರನ್ನು ಮೊ.7338552630 ಮೂಲಕ ಸಂಪರ್ಕಿಸಿ ನೋಂದಾಯಿಸಿ ಕೊಳ್ಳಬಹುದೆಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ, ಕಾರ್ಯದರ್ಶಿ ಕಟ್ಟೆಮನೆ ರೋಷನ್, ಕ್ರೀಡಾ ಸಮಿತಿ ಅಧ್ಯಕ್ಷ ಬಾಳಾಡಿ ಮನೋಜ್, ಸಾಂಸ್ಕøತಿಕ ಸಮಿತಿ ಅಧ್ಯಕ್ಷ ಕುಕ್ಕೇರ ಲಕ್ಷ್ಮಣ ಹಾಗೂ ನಿರ್ದೇಶಕ ಪೈಕೇರ ಗಗನ್ ದೇವಯ್ಯ ಉಪಸ್ಥಿತರಿದ್ದರು.