ಸಿದ್ದಾಪುರ: ಅಮ್ಮತ್ತಿ-ಒಂಟಿಯಂಗಡಿಯ ಶ್ರೀ ಮುತ್ತಪ್ಪ ದೇವಸ್ಥಾನದ ವಾರ್ಷಿಕೋತ್ಸವ ಹಾಗೂ ತೆರೆ ಮಹೋತ್ಸ ತಾ. 7 ಹಾಗೂ 8 ರಂದು ನಡೆಯಲಿದೆ.
ತಾ. 7 ರಂದು ಬೆಳಿಗ್ಗೆ 6 ಗಂಟೆಗೆ ಗಣಪತಿ ಹೋಮ, 8 ಗಂಟೆಗೆ ಧ್ವಜಾರೋಹಣ, ಸಂಜೆ 3.30 ಕ್ಕೆ ಮುತ್ತಪ್ಪನನ್ನು ಮಲೆ ಇಳಿಸುವದು, 7 ಗಂಟೆಗೆ ಶಾಸ್ತಪ್ಪನ ವೆಳ್ಳಾಟಂ, ರಾತ್ರಿ 8.30 ಕ್ಕೆ ಗುಳಿಗನ ವೆಳ್ಳಾಟಂ, 9.30 ಕ್ಕೆ ಕಲಶ ತರುವದು, 10 ಗಂಟೆಗೆ ಅನ್ನದಾನ, 12 ಗಂಟೆಗೆ ವಸೂರಿಮಾಲ ಸ್ನಾನಪೂಜೆ ಹಾಗೂ ತೆರೆ ನಡೆಯಲಿದೆ.
ತಾ. 8 ರಂದು ಪ್ರಾತಃಕಾಲ 1 ಗಂಟೆಗೆ ಕಳಿಯ ಪಾಟ್, 3 ಗಂಟೆಗೆ ಗುಳಿಗನ ತೆರೆ, ಬೆಳಿಗ್ಗೆ 5 ಗಂಟೆಗೆ ಶಾಸ್ತಪ್ಪನ ತೆರೆ, 6 ಗಂಟೆಗೆ ಮತ್ತಪ್ಪ ಹಾಗೂ ತಿರುವಪ್ಪನ ತೆರೆ, 11 ಗಂಟೆಗೆ ವಸೂರಿಮಾಲ ತೆರೆ ಹಾಗೂ ಮಧ್ಯಾಹ್ನ 1 ಗಂಟೆಗೆ ಅನ್ನದಾನ ನಡೆಯಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.
ಹುದಿಕೇರಿ: ಹುದಿಕೇರಿಯ ಶ್ರೀ ಮಹಾ ದೇವರ ದೇವಾಲಯದಲ್ಲಿ ತಾ. 8 ರಂದು ಸಂಜೆ 5.30 ಕ್ಕೆ ದೇವತಾ ಪ್ರಾರ್ಥನೆಯೊಂದಿಗೆ ಅಷ್ಟಬಂಧ ಬ್ರಹ್ಮ ಕಲಶೋತ್ಸವ ಸಂಬಂಧ ಪೂಜಾಧಿ ಆರಂಭಗೊಳ್ಳಲಿದೆ. ತಾ. 9 ರಂದು ಬೆಳಿಗ್ಗೆ 7 ರಿಂದ ಗಣಹೋಮ ಸಹಿತ ಪ್ರಾಯಶ್ಚಿತ ಹೋಮಗಳು ಹಾಗೂ ಸಂಜೆ ಕಲಶಾದಿವಾಸ ಇತ್ಯಾದಿ ಜರುಗಲಿದೆ.
ತಾ. 10 ರಂದು ಹಗಲು ಶುಭ ಮುಹೂರ್ತದಲ್ಲಿ ಅಷ್ಟಬಂಧ ಬ್ರಹ್ಮ ಕಲಶೋತ್ಸವದೊಂದಿಗೆ ಅಭಿಷೇಕ ಪೂಜೆ, ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಾಲಯ ಸಮಿತಿ ಪ್ರಕಟಣೆ ತಿಳಿಸಿದೆ.
ಮಾಯಮುಡಿ: ಇಲ್ಲಿನ ಶ್ರೀ ಮುತ್ತಪ್ಪ ದೇವರ ಉತ್ಸವ ತಾ. 6 ಮತ್ತು 7 ರಂದು ನಡೆಯಲಿದೆ. ತಾ. 6 ರಂದು ಬೆಳಿಗ್ಗೆ 6 ಗಂಟೆಗೆ ಗಣಪತಿ ಹೋಮ ಹಾಗೂ ಧ್ವಜಾರೋಹಣ ನಡೆಯಲಿದೆ. ಸಂಜೆ 7 ಗಂಟೆಯಿಂದ ಮುತ್ತಪ್ಪ, ಗುಳಿಗ ಮತ್ತು ವಸೂರಿಮಾಲ ದೇವರ ವೆಳ್ಳಾಟಂ ಇರುತ್ತದೆ.
ತಾ. 7 ರಂದು ಪ್ರಾತಃಕಾಲ 4 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಮುತ್ತಪ್ಪ, ತಿರುವಪ್ಪನ, ಗುಳಿಗ, ವಸೂರುಮಾಲ, ಕುಟ್ಟಿಚಾತ, ಭಗವತಿ ಮುಂತಾದ ದೇವರುಗಳ ತೆರೆ ಮಹೋತ್ಸವ ನಡೆಯಲಿದೆ. ತಾ. 6 ರ ರಾತ್ರಿ 8 ಗಂಟೆಗೆ ಹಾಗೂ ತಾ. 7 ರ ಮಧ್ಯಾಹ್ನ 12 ಗಂಟೆಗೆ ಭಕ್ತಾದಿಗಳಿಗೆ ಅನ್ನದಾನ ಏರ್ಪಡಿಸಲಾಗಿದೆ.
ಕೂಡಿಗೆ: ಹುದುಗೂರು ಗ್ರಾಮದ ಶ್ರೀ ಉಮಾಮಹೇಶ್ವರ ಕ್ಷೇತ್ರದ ವಾರ್ಷಿಕ ವಿಶೇಷ ಪೂಜಾ ಕಾರ್ಯಕ್ರಮ ತಾ. 15 ರಂದು ನಡೆಯಲಿದೆ. ಅಂದು ಬೆಳಿಗ್ಗೆ ಶ್ರೀ ಗಣಪತಿ ಹೋಮ, ಶ್ರೀ ಮೃತ್ಯುಂಜಯ ಹೋಮ, ಪ್ರಧಾನ ದೇವರಿಗೆ ಹಾಗೂ ಇತರ ಉಪ ದೇವತೆಗಳಿಗೆ ವಿಶೇಷ ಅಭಿಷೇಕ, ಅರ್ಚನೆ, ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿವೆ ಎಂದು ದೇವಾಲಯ ಸಮಿತಿಯ ಟಿ.ಎಂ. ಚಾಮಿ ತಿಳಿಸಿದ್ದಾರೆ.
ನಾಪೆÇೀಕ್ಲು: ನಾಪೆÇೀಕ್ಲು ಸಮೀಪದ ಕಕ್ಕುಂದಕಾಡು ಶ್ರೀ ವೆಂಕಟೇಶ್ವರ ದೇವರ ವಾರ್ಷಿಕ ಉತ್ಸವವು ತಾ. 8 ಮತ್ತು ತಾ. 9 ರಂದು ನಡೆಯಲಿದೆ.
ತಾ. 8 ರಂದು ಬೆಳಿಗ್ಗೆ 8 ಗಂಟೆಗೆ ಪಂಚಾಮೃತಾಭಿಷೇಕ, ಸಂಜೆ 6.30 ಗಂಟೆಗೆ ಧ್ವಜಾರೋಹಣ, ರಾತ್ರಿ 8 ಗಂಟೆಗೆ ದೀಪಾರಾಧನೆ, ದೇವರ ಉತ್ಸವ ಮೂರ್ತಿ ದರ್ಶನ, ನೃತ್ಯ ಬಲಿ, ಮಹಾಪೂಜೆ, ಪ್ರಸಾದ ವಿತರಣೆ. ತಾ. 9 ರಂದು ಬೆಳಿಗ್ಗೆ 5.30 ಗಂಟೆಗೆ ದೇವರ ದರ್ಶನ, ನೃತ್ಯ, ವಿಶೇಷ ಸೇವೆಗಳು, ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, 1 ಗಂಟೆಗೆ ಪಟ್ಟಣಿ ಹಬ್ಬ, ದೇವರ ಬಲಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ 5.30ಕ್ಕೆ ದೇವರ ಅವಭೃತ ಸ್ನಾನ, ದೇವರ ನೃತ್ಯ, ವಸಂತ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ.