ಸೋಮವಾರಪೇಟೆ, ಏ. 5: ಇಲ್ಲಿನ ಬ್ರಾಹ್ಮಣ ಸಮಾಜದ ಆಶ್ರಯದಲ್ಲಿ ಸೋಮೇಶ್ವರ ದೇವಾಲಯದ ದೇವಿ ಬಳಗದ ವತಿಯಿಂದ ನಂಜಮ್ಮ ಕಲ್ಯಾಣ ಮಂಟಪದಲ್ಲಿ ವಿಶ್ವ ಮಹಿಳಾ ದಿನಾಚರಣೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಿಕ್ಷಕಿ ವಿದ್ಯಾ ವಿಶ್ವನಾಥ್ ಅವರು, ಪ್ರಸ್ತುತ ಮಹಿಳೆಯರು ಸಾರ್ವಜನಿಕ ಜೀವನದಲ್ಲಿಯೂ ಸಹ ತಮ್ಮ ಅಸ್ತಿತ್ವವನ್ನು ಸಾಬೀತುಪಡಿಸುತ್ತಿದ್ದಾರೆ. ರಾಜಕೀಯ, ಆಡಳಿತ, ಕ್ರೀಡೆ, ವಿಜ್ಞಾನ ತಂತ್ರಜ್ಞಾನ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸುತ್ತಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ನಂದನಾ ಮಧುಸೂದನ್, ಲಕ್ಷ್ಮೀ ಶ್ರೀನಿವಾಸ್, ನಮ್ರತಾ ದಿನೇಶ್ ಅವರುಗಳಿಂದ ಕವನ ವಾಚನ ನಡೆಯಿತು. ಬಳಗದ ಹಿರಿಯ ಸದಸ್ಯೆ ಚೂಡಾಮಣಿ ಅವರನ್ನು ಸನ್ಮಾನಿಸಲಾಯಿತು. ಮಹಿಳಾ ಸದಸ್ಯರಿಗೆ ಫ್ಯಾಷನ್ ಶೋ ಸೇರಿದಂತೆ ಇನ್ನಿತರ ಸ್ಪರ್ಧೆಗಳನ್ನು ನಡೆಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಿ ಬಳಗದ ಅಧ್ಯಕ್ಷೆ ಸುಮಾ ಚಿರಂಜೀವಿ ವಹಿಸಿದ್ದರು. ಕಾರ್ಯದರ್ಶಿ ಪ್ರೇಮಾ ಶ್ರೀಧರ್, ಪದಾಧಿಕಾರಿಗಳಾದ ವಿದ್ಯಾ ಸೋಮೇಶ್, ಆಶಾ ಸತೀಶ್, ಕವಿತಾ ಹರೀಶ್, ಗಾಯತ್ರಿ ದಾಮೋದರ್, ವಸಂತ ರಮೇಶ್, ಸಂದ್ಯಾ ರಾಮ್‍ಪ್ರಸಾದ್, ಅನಿತಾ, ಸುಮಾ ಆನಂದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.