ನಾಪೆÇೀಕ್ಲು, ಏ. 5: ಯಾವದೇ ಸರಕಾರ ಇರಲಿ, ಯಾವ ಚುನಾವಣೆನೇ ಬರಲಿ, ಗ್ರಾಮೀಣ ಪ್ರದೇಶದ ಜನರ ಕಷ್ಟ, ದುಖಃ, ಬವಣೆಯಲ್ಲಿ ಯಾವದೇ ಬದಲಾವಣೆಯಾಗುವದಿಲ್ಲ. ಇದಕ್ಕೆ ಉದಾಹರಣೆ ನಾಪೆÇೀಕ್ಲು - ಮೂಟೇರಿ ರಸ್ತೆ.

ನಾಪೆÇೀಕ್ಲು ಪಟ್ಟಣದ ಶ್ರೀ ರಾಮ ಮಂದಿರದ ಬಳಿಯಿಂದ ಮೂಟೇರಿ ಉಮಾಮಹೇಶ್ವರಿ ದೇವಳಕ್ಕೆ ಸಂಪರ್ಕ ಕಲ್ಪಿಸುವ ಡಾಮರು ರಸ್ತೆಯಲ್ಲಿ ವಾಹನ ಸಂಚಾರವೇ ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಡಾಮರು ರಸ್ತೆಯಲ್ಲಿ ಡಾಮರನ್ನು ಹುಡುಕಬೇಕಾದ ಅನಿವಾರ್ಯತೆ ಉಂಟಾಗಿದೆ. ಈ ರಸ್ತೆಯ ಪರಿಸ್ಥಿತಿ ಇಂದು, ನಿನ್ನೆಯದಲ್ಲ. ರಾಜ್ಯ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿಯೇ ಈ ರಸ್ತೆ ಹದಗೆಟ್ಟಿದೆ. ಈಗ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದರೂ, ಈ ರಸ್ತೆಯ ದುರಸ್ತಿಗೆ ಯಾರೂ ಕ್ರಮಕೈಗೊಂಡಿಲ್ಲ ಎನ್ನುತ್ತಾರೆ ಈ ವ್ಯಾಪ್ತಿಯ ಗ್ರಾಮಸ್ಥರು.

ಮೂಟೇರಿಯಲ್ಲಿ ಈ ಹಿಂದೆ ಇದ್ದ ಕಿರಿಯ ಪ್ರಾಥಮಿಕ ಶಾಲೆಯನ್ನು ಮಕ್ಕಳ ಕೊರತೆಯ ಕಾರಣದಿಂದ ಮುಚ್ಚಲಾಗಿದೆ. ಇದರಿಂದ ಈ ವ್ಯಾಪ್ತಿಯ ಪುಟ್ಟ ಮಕ್ಕಳು ಸೇರಿದಂತೆ ಎಲ್ಲಾ ಶಾಲಾ- ಕಾಲೇಜು ವಿದ್ಯಾರ್ಥಿಗಳು ಈ ರಸ್ತೆಯಲ್ಲಿ ನಡೆದು ನಾಪೆÇೀಕ್ಲು ಪಟ್ಟಣ ಸೇರಬೇಕಾಗಿದೆ. ರಸ್ತೆ ಸರಿಯಿಲ್ಲದ ಕಾರಣ ಆಟೋ ರಿಕ್ಷಾಗಳು ಈ ರಸ್ತೆಯಲ್ಲಿ ಓಡಾಡುತ್ತಿರುವದು ವಿರಳವಾಗಿದೆ. ರಿಕ್ಷಾ ಬರಬೇಕಾದರೆ ದುಬಾರಿ ಬಾಡಿಗೆ ನೀಡಬೇಕಾಗುತ್ತದೆ ಎನ್ನುವ ಗ್ರಾಮಸ್ಥರು ಕೂಡಲೇ ಈ ರಸ್ತೆ ದುರಸ್ತಿಗೆ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ವಾಹನ ಸಂಚಾರ ಹಾಗಿರಲಿ. ಈ ರಸ್ತೆಯಲ್ಲಿ ನಡೆದಾಡಲೇ ಸಾಧ್ಯವಿಲ್ಲ. ಈ ರಸ್ತೆಯ ಬಗ್ಗೆ ಯಾರೂ ಗಮನಹರಿಸುತ್ತಿಲ್ಲ. ಸಂಬಂಧಿಸಿದವರು ಕೂಡಲೇ ರಸ್ತೆ ದುರಸ್ತಿಗೆ ಕ್ರಮಕೈಗೊಳ್ಳುವದರ ಮೂಲಕ ಜನರಿಗೆ ಅನುಕೂಲ ಕಲ್ಪಿಸಬೇಕು ಎಂದು ಗ್ರಾಮಸ್ಥ ಬಿದ್ದಾಟಂಡ ಸಂಪತ್ ಆಗ್ರಹಿಸಿದ್ದಾರೆ.