ಮಡಿಕೇರಿ, ಏ. 5: 'ಕೊಡಗು ಪ್ರವಾಹ ಪರಿಹಾರ ನಿಧಿಯಿಂದ ಪ್ರವಾಹ ಮತ್ತು ಭೂಕುಸಿತ ಪೀಡಿತ ಜನರಿಗೆ ಟಾಟಾ ಕಾಫಿ ಲಿಮಿಟೆಡ್, ಪಾಲಿಬೆಟ್ಟದಲ್ಲಿ ಪರಿಹಾರ ವಿತರಣೆ ಮಾಡಲಾಯಿತು.
ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಪ್ರವಾಹ ಮತ್ತು ಭೂಕುಸಿತಗಳಿಂದ ನೂರಾರು ಜನರು ನಿರಾಶ್ರಿತರಾಗಿದ್ದು, ಕೆಪಿಎ ಸಂಸ್ಥೆ ಸಂಕಷ್ಟ ಅನುಭವಿಸಿದವರಿಗೆ ಸಹಾಯ ಮಾಡಲು 'ಕೊಡಗು ಪ್ರವಾಹ ಪರಿಹಾರ ನಿಧಿ' ಸ್ಥಾಪಿಸಿತ್ತು.
ಸಂಸ್ಥೆಯ ಮನವಿಗೆ ಸದಸ್ಯರು ಮತ್ತು ಸದಸ್ಯರಲ್ಲದವರು ಉದಾರವಾಗಿ ಸ್ವಯಂಪ್ರೇರಣೆಯಿಂದ ದಾನ ಮಾಡಿದ್ದು, ಒಟ್ಟು ರೂ. 4,73,000/- ಸಂಗ್ರಹಿಸಲಾಗಿದೆ. ಅತ್ಯಂತ ಸಂಕಷ್ಟದಲ್ಲಿರುವ 16 ಜನರನ್ನು ಗುರುತಿಸಿ ಸರಳ ಸಮಾರಂ¨sದÀಲ್ಲಿ ಕೆಪಿಎ ಸಂಸ್ಥೆಯ ಅಧ್ಯಕ್ಷ ಒ. ಗಣಪತಿ ಮತ್ತು ಕೊಡಗು ಪ್ರವಾಹ ಪರಿಹಾರ ನಿಧಿಗೆ ದಾನ ಮಾಡಿದ ಸದಸ್ಯರುಗಳು 16 ಮಂದಿಗೆ ತಲಾ ರೂ. 25 ಸಾವಿರದಂತೆ ಪರಿಹಾರ ವಿತರಣೆ ಮಾಡಿದರು.