ಮಡಿಕೇರಿ, ಏ. 5: ಇದೇ ತಾ. 15 ರಂದು ಹಿಮಾಚಲ ಪ್ರದೇಶದಲ್ಲಿ ನಡೆಯಲಿರುವ ರಾಷ್ಟ್ರೀಯ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ವೀರಾಜಪೇಟೆಯ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿನಿ ತುಷಾಲಿಗೆ ಮಡಿಕೇರಿ ಆಕಾಶವಾಣಿ ಸಿಬ್ಬಂದಿ ರೂ. 10 ಸಾವಿರ ಹಣವನ್ನು ಸಹಾಯವಾಗಿ ನೀಡಿ ಶುಭ ಕೋರಿದರು.
ನೃತ್ಯದಲ್ಲಿ ಪ್ರತಿಭಾವಂತಳಾಗಿರುವ ತುಷಾಲಿಗೆ ಪ್ರಯಾಣ ಮತ್ತು ಇತರ ಖರ್ಚುಗಳಿಗೆ ಹಣದ ಕೊರತೆ ಇರುವದನ್ನು ಮನಗಂಡು ಈ ಸಹಾಯ ಮಾಡಲಾಯಿತು ಎಂದು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ಡಾ.ವಿಜಯ್ ಅಂಗಡಿ ಹೇಳಿದರು. ಈ ಹಿಂದೆ ಮಡಿಕೇರಿ ಆಕಾಶವಾಣಿಯ ಯುವವಾಣಿಯಲ್ಲಿ ಈಕೆಯ ಸಂದರ್ಶನ ಪ್ರಸಾರ ಮಾಡಲಾಗಿತ್ತು.
ಈ ಸಂದರ್ಭ ಆಕಾಶವಾಣಿಯ ಅಧಿಕಾರಿಗಳಾದ ಟಿ.ಕೆ. ಉನ್ನಿಕೃಷ್ಣನ್, ಆರ್. ಶ್ರೀನಿವಾಸನ್, ಬಿ. ದಿಗ್ವಿಜಯ್, ಇತರ ಸಿಬ್ಬಂದಿಗಳು, ವೀರಾಜಪೇಟೆಯ ವಿಷ್ಣುಮೂರ್ತಿ ಹಾಜರಿದ್ದರು.