ಚೆಟ್ಟಳ್ಳಿ, ಏ. 4: ಕಳೆದ ಹಲವು ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೊಟ್ಟಮುಡಿ ಸಮೀಪದ ಹೊದವಾಡದ ಟಿ.ಎ. ಉಸ್ಮಾನ್ ಅವರು ಎ.ಎಸ್.ಐ.ಯಾಗಿ ಆಯ್ಕೆಯಾಗಿರುವದರಿಂದ ಅವರನ್ನು ಹೈದ್ರೋಸ್ ಜುಮಾ ಮಸ್ಜಿದ್ ವತಿಯಿಂದ ನಡೆದ ಸಾರ್ವಜನಿಕ ಸಮ್ಮೇಳನದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭ ಕಿಲ್ಲೂರ್ ತಂಙಲ್, ಮಜೀದ್ ಉಸ್ತಾದ್, ಅಶ್ರಫ್ ಅಹ್ಸನಿ, ಹುಸೈನ್ ಸಖಾಫಿ, ಹಫೀಲ್ ಸಹದಿ, ಇಸ್ಮಾಯಿಲ್ ಸಖಾಫಿ ಹಾಗೂ ಸಿನಾನ್ ಇದ್ದರು.