ಗೋಣಿಕೊಪ್ಪ ವರದಿ, ಏ. 4: ಪೊ. ನಂಜುಂಡ ಸ್ವಾಮಿ ಸ್ಥಾಪಿತ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಅಧ್ಯಕ್ಷರಾಗಿ ಚಿಮ್ಮಂಗಡ ಗಣೇಶ್ ಗಣಪತಿ ಅವರನ್ನು ನೇಮಕ ಮಾಡಲಾಗಿದೆ.
ರಾಜ್ಯ ರೈತ ಸಂಘದ ಅಧ್ಯಕ್ಷ ಜೆ.ಎ. ಲಕ್ಷ್ಮಿನಾರಾಯಣಗೌಡ ಅವರು ನೇಮಕ ಮಾಡಿ ಹೇಳಿಕೆ ನೀಡಿದ್ದಾರೆ. ರೈತರ ಶ್ರೇಯೋಭಿವೃದ್ಧಿಗೆ ರೈತಪರ ಚಿಂತನೆ ಮೂಲಕ ರೈತ ಕಲ್ಯಾಣಕ್ಕಾಗಿ ತಾಲೂಕು ಸಂಘಟನೆ ಸ್ಥಾಪಿಸಿ ರೈತರ ಅಭಿವೃದ್ಧಿಗೆ ಮುತುವರ್ಜಿ ವಹಿಸುವಂತೆ ತಿಳಿಸಿದ್ದಾರೆ.