ಪೆರಾಜೆ, ಏ. 4: ಯುವ ಕೋಟೆ ಯುವಕ ಮಂಡಲ ಪುತ್ಯ ಪೆರಾಜೆ ಇದರ ವತಿಯಿಂದ ನಡೆಯುವ ತಿಂಗಳ ಶ್ರಮದಾನವನ್ನು ಉಳ್ಳಾಕುಲ ದೇವಸ್ಥಾನದ ವಠಾರದಲ್ಲಿ ಹಮ್ಮಿಕೊಳ್ಳಲಾಯಿತು. ದೇವಸ್ಥಾನದ ಎದುರಿನ ಭಾಗದ ನೆಲ ಸಮತಟ್ಟು ಮಾಡಿ ನಂತರ ದೇವಸ್ಥಾನದ ಕೆಳಗಿನ ಆವರಣದಲ್ಲಿ ಬಿದ್ದಿರುವ ಕಸಕಡ್ಡಿಗಳನ್ನು ಹೆಕ್ಕಿ ಸ್ವಚ್ಛಗೊಳಿಸಲಾಯಿತು.
ಸ್ವಚ್ಛತಾ ಕಾರ್ಯದಲ್ಲಿ ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಕಿರಣ್ ಬಂಗಾರಕೋಡಿ, ಯುವಕ ಮಂಡಲದ ಸಲಹೆಗಾರ ಶುಭಾಶ್ ಬಂಗಾರಕೋಡಿ, ಯುವಕ ಮಂಡಲದ ಅಧ್ಯಕ್ಷ ಲಿಖಿತ್ ಅಡ್ಕದಮನೆ, ಕಾರ್ಯದರ್ಶಿ ಕೌಶಿಕ್ ತೊಕ್ಕುಳಿ, ಉಪಾಧ್ಯಕ್ಷ ಮೋನಿಷ್ ವ್ಯಾಪಾರೆ, ಖಜಾಂಚಿ ಶ್ರೀಕಾಂತ್ ವ್ಯಾಪಾರೆ, ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.