ಮಡಿಕೇರಿ, ಏ. 4: ನಗರದ ಬ್ರೈನೋಬ್ರೈನ್ ಅಬಾಕಸ್ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭ ಹೊಟೇಲ್ ಕೂರ್ಗ್ ಇಂಟರ್ ನ್ಯಾಷನಲ್‍ನಲ್ಲಿ ನಡೆಯಿತು.

ಒಟ್ಟು 15 ಮಕ್ಕಳು ಪದವಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದರು. ಇದು 16ನೇ ತಂಡವಾಗಿದ್ದು, ಕಾರ್ಯಕ್ರಮದಲ್ಲಿ ಬ್ರೈನೋಬ್ರೈನ್ ಸಂಸ್ಥೆಯ ಕರ್ನಾಟಕ ವಲಯ ನಿರ್ದೇಶಕ ಆರ್. ರಾಮಕೃಷ್ಣ ಮತ್ತು ಮಡಿಕೇರಿ ಕೇಂದ್ರದ ಮುಖ್ಯಸ್ಥೆ ಮಾಪಂಗಡ ಕವಿತಾ ಕರುಂಬಯ್ಯ ಉಪಸ್ಥಿತರಿದ್ದರು.

ಮಿನ್ನಂಡ ತರನ್ ಚಂಗಪ್ಪ, ಕೆ.ಇ. ದೀಕ್ಷಾ, ಬಿ.ಆರ್. ಯಶ್ವಂತ್, ಸಾಯಿ ಪ್ರಸಾದ್, ಎಸ್. ಕಾಮತ್, ಬಿ.ಯು. ಪ್ರದ್ಯುಮ್ನ, ಬಿ.ಯು. ಅನಿರುದ್, ಬಿ.ಎ. ಪ್ರಜಕ್ತ, ಎಂ.ಎ. ಸುಜಾನ್, ರಾಹುಲ್ ರಾಯ್, ಎಸ್.ಆರ್. ಮನಿಷ್, ಜಿ. ವಂದನಾ, ಯಶ್ವಿನ್ ಬೋಪಯ್ಯ, ರಿದಾ ಸುಮನ್ ಬಿ.ಆರ್., ಕೆ.ಆರ್. ರೋಷನ್ ಮತ್ತು ಬಿ.ಪಿ. ಅಮೋಘ್ ಇವರುಗಳಿಗೆ ಪದವಿ ಪ್ರದಾನ ಮಾಡಲಾಯಿತು.