ನಾಪೆÉÇೀಕ್ಲು, ಏ. 2 : ಇತಿಹಾಸ ಪ್ರಸಿದ್ಧ ಶ್ರೀ ಪೊನ್ನುಮುತ್ತಪ್ಪ ದೇವರ ವಾರ್ಷಿಕ ಉತ್ಸವವು ತಾ. 3 ರಿಂದ 5 ರವರೆಗೆ ನಡೆಯಲಿದೆ. ತಾ. 3 ರ ಬೆಳಿಗ್ಗೆ 6 ಗಂಟೆಗೆ ಗಣಪತಿ ಹೋಮ, ರಾತ್ರಿ 8 ಗಂಟೆಗೆ ದೇವಿ ಪೂಜೆ ಮತ್ತು ಗುರು ಪೂಜೆ. 4 ರಂದು ಸಂಜೆ 3.30 ಗಂಟೆಗೆ ಪೈಂಗುತ್ತಿ. ಸಂಜೆ 6 ಗಂಟೆಗೆ ಶ್ರೀ ಮುತ್ತಪ್ಪ ದೇವರ ಕಳಸ. ಪವಿತ್ರ ಕಾವೇರಿ ನದಿಯಲ್ಲಿ ಸ್ನಾನದ ನಂತರ ಕೇರಳದ ಪ್ರಖ್ಯಾತ ಚಂಡೆಯೊಂದಿಗೆ ನಾಪೆÇೀಕ್ಲು ಪೇಟೆಯ ಮುಖ್ಯ ಬೀದಿಯಲ್ಲಿ ಸನ್ನಿಧಾನಕ್ಕೆ ಆಗಮನ ಸಂಜೆ 6 ಗಂಟೆಗೆ ಮುತ್ತಪ್ಪ ದೇವರ ಬೊಳ್ಳಾಟಂ. 9 ಗಂಟೆಗೆ ಭಕ್ತಾಧಿಗಳಿಗೆ ಅನ್ನದಾನ 11 ಗಂಟೆಗೆ ಶ್ರೀ ಕುಟ್ಟಿಚಾತ ಬೊಳ್ಳಾಟಂ.
ತಾರೀಕು 5 ರಂದು ಪ್ರಾತಃಕಾಲ 1 ಗಂಟೆಗೆ ಗುಳಿಗ ತೆರೆಕೋಲ, ಬೆಳಿಗ್ಗೆ 5 ಗಂಟೆಗೆ ಕುಟ್ಟಿಚಾತ ತೆರೆ ( ಕೋಲ) ಬೆಳಿಗ್ಗೆ 6 ಗಂಟೆಗೆ ತಿರುವಪನೆ ಮತ್ತು ಮುತ್ತಪ್ಪ ತೆರೆ ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.