ಕೂಡಿಗೆ, ಏ. 3: ಸೋಮವಾರಪೇಟೆಯ ಕರ್ನಾಟಕ ಮಾನವ ಹಕ್ಕುಗಳ ಜನ ಜಾಗೃತಿ ವೇದಿಕೆ ಹಾಗೂ ಕಾವೇರಿ ತಾಲೂಕು ಘಟಕದ ವತಿಯಿಂದ ಕೂಡಿಗೆಯ ಶ್ರೀಶಕ್ತಿ ವೃದ್ಧಾಶ್ರಮಕ್ಕೆ ಸೀಲಿಂಗ್ ಫ್ಯಾನ್ ಅನ್ನು ಉಚಿತವಾಗಿ ನೀಡಲಾಯಿತು.
ಈ ಸಂದರ್ಭ ಕರ್ನಾಟಕ ಮಾನವ ಹಕ್ಕುಗಳ ಜನ ಜಾಗೃತಿ ವೇದಿಕೆಯ ಆರ್. ಗಿರೀಶ್, ರಾಜ್ಯ ಸಂಚಾಲಕ ಎನ್. ಗುರುಸ್ವಾಮಿ, ಕುಶಾಲನಗರ ಗ್ರಾಮಾಂತರ ಸಂಚಾರಿ ಠಾಣೆಯ ಸಹಾಯಕ ಅಧಿಕಾರಿ ಆಶಾ ಸುರೇಶ್, ಶ್ರೀಶಕ್ತಿ ವೃದ್ಧಾಶ್ರಮದ ಮೇಲ್ವಿಚಾರಕ ಸತೀಶ್, ಚಂದ್ರು, ಒಕ್ಕೂಟದ ತಾಲೂಕು ಕಾರ್ಯದರ್ಶಿ ಶಬ್ಬೀರ್ ಅಹಮದ್, ಪ್ರಮುಖರಾದ ಬೇಬಿ ಸೇರಿದಂತೆ ಇನ್ನಿತರರು ಇದ್ದರು.