ಶ್ರೀಮಂಗಲ, ಏ.2: ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿ ಶೀಟರ್‍ಗಳ ಪೆರೆಡ್ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ನಡೆಯಿತು. ಈ ಸಂದರ್ಭ ಡಿವೈಎಸ್‍ಪಿ ನಾಗಪ್ಪ ಅವರು ಮಾತನಾಡಿ ರೌಡಿ ಶೀಟರ್ ಪಟ್ಟಿಯಲ್ಲಿ ಹೆಸರು ಇರುವವರು ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರದಂತೆ ಎಚ್ಚರದಿಂದಿರಬೇಕು.
ಯಾವದೇ ಕಾನೂನು ಬಾಹಿರ ಚಟುವಟಿಕೆ ಹಾಗೂ ಸಮಾಜದಲ್ಲಿ ಶಾಂತಿ ಕದಡುವ ಪ್ರಕರಣದಲ್ಲಿ ಪಾಲ್ಗೊಳ್ಳು ವದು ಅಥವಾ ಅದಕ್ಕೆ ಕುಮ್ಮುಕ್ಕು ನೀಡುವದು ಕಂಡುಬಂದರೆ ಕಾನೂನು ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಿದರು.
ಈ ಸಂದರ್ಭ ಕುಟ್ಟ ವೃತ್ತ ನಿರೀಕ್ಷಕ ಮಹೇಶ್, ಶ್ರೀಮಂಗಲ ಠಾಣಾಧಿಕಾರಿ ಮರಿಸ್ವಾಮಿ ಹಾಜರಿದ್ದರು.