ಮಡಿಕೇರಿ, ಏ. 3: ಭಾರತೀಯ ಜನತಾ ಪಾರ್ಟಿ ನರೇಂದ್ರ ಮೋದಿ ಅವರನ್ನು ವೈಭವೀಕರಿಸಿ, ವ್ಯಸನಕ್ಕೀಡು ಮಾಡುವ ಮೂಲಕ ಮತ ಪಡೆಯುವ ವಿಫಲ ಯತ್ನಕ್ಕೆ ಮುಂದಾಗಿದೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರÀ ವಿ.ಪಿ. ಶಶಿಧರ್ ಟೀಕಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾ ಡಿದ ಅವರು, ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮಂದಿ ವಾಸ್ತವಕ್ಕೆ ದೂರ ವಾದ ವಿಚಾರಗಳನ್ನು ಮುಂದಿಟು ್ಟಕೊಂಡು ಹುರುಳಿಲ್ಲದ ಆರೋಪ ಗಳಲ್ಲಿ ತೊಡಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೊಡಗಿನ ಅಸ್ತಿತ್ವಕ್ಕೆ ಮಾರಕವಾದ ಡಾ. ಕಸ್ತೂರಿ ರಂಗನ್ ವರದಿ ಜಾರಿಯ ಕರಡು ಅಧಿಸೂಚನೆ ಹೊರ ಬಿದ್ದು ಆರು ತಿಂಗಳು ಕಳೆದಿದೆ. ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಯೋಜನೆ ಜಾರಿಗೆ ಯಾವದೇ ಕಾರಣಕ್ಕೂ ಅವಕಾಶ ನೀಡುವ ದಿಲ್ಲವೆಂದು ಈ ಹಿಂದೆ ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಬಿಜೆಪಿ ಸಂಸದರುಗಳು ಭರವಸೆ ನೀಡಿದ್ದರು. ಆದರೆ ಯೋಜನೆ ಜಾರಿಗೊಳ್ಳುವ ಹಂತದಲ್ಲಿರುವ ಬಗ್ಗೆ ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಅವರು ಇದೀಗ ಸಂಸದ ಪ್ರತಾಪ ಸಿಂಹ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ದ್ದಾರೆ ಎಂದು ಶಶಿಧರ್ ವ್ಯಂಗ್ಯವಾಡಿದರು. ಸೂಕ್ಷ್ಮ ಪರಿಸರ ವಲಯದ ಅಂಚಿನಿಂದ ಬಫರ್ ಝೋನ್‍ನ್ನು ‘0’ಗೆ ಸೀಮಿತಗೊಳಿಸಿದ್ದು, ಇದಕ್ಕೆ ಶಾಸಕರಗಳಾದ ಅಪ್ಪಚ್ಚು ರಂಜನ್ ಮತ್ತು ಕೆ.ಜಿ. ಬೋಪಯ್ಯ ಕಾರಣರೆಂದು ಸಂಸದ ಪ್ರತಾಪ್‍ಸಿಂಹ ಅವರು ಹಸಿ ಸುಳ್ಳು ಹೇಳಿದ್ದರು. ಪ್ರತಾಪ್‍ಸಿಂಹ ಅವರ ಕಾರ್ಯ ವೈಖರಿಯ ಬಗ್ಗೆ ಅವರದೇ ಪಕ್ಷದ ಎಂ.ಬಿ. ದೇವಯ್ಯ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು ಎಂದು ಉಲ್ಲೇಖಿಸಿದರು.

ವಿಯೆಟ್ನಾಂನಿಂದ ಕರಿಮೆಣಸಿನ್ನು ಆಮದು ಮಾಡಿ ಇಲ್ಲಿನ ಗುಣಮಟ್ಟದ ಕಾಳುಮೆಣಸಿನೊಂದಿಗೆ ಬೆರೆಸಿ ಮಾರಾಟ ಮಾಡಲಾಗುತ್ತಿದ್ದು, ಇದರಿಂದ ಇಲ್ಲಿನ ಕಾಳುಮೆಣಸಿನ ದರ ಕುಸಿತಕ್ಕೆ ಒಳಗಾಗಿದೆ. ಇಂತಹ ಸಮಸ್ಯೆಗಳತ್ತ ಸಂಬಾರ ಮಂಡಳಿಯ ಸದಸ್ಯರೂ ಆಗಿರುವ ಪ್ರತಾಪ ಸಿಂಹ ಸ್ಪಂದಿಸಿಲ್ಲ ಎಂದರು. ಕೊಡಗಿಗೆ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಕೇಂದ್ರ ಸಚಿವೆ ಸ್ಮøತಿ ಇರಾನಿ ಅವರು 30 ಕೋಟಿ ಜನ್‍ಧನ್ ಖಾತೆ ತೆರೆದಿರುವದಾಗಿ ತಿಳಿಸಿದ್ದಾರೆ. ಈ ಖಾತೆಗೆ ಹಣ ಹಾಕಿ ನೆರವಾಗಿ ದ್ದಾರೆಯೇ ಎಂದು ಪ್ರಶ್ನಿಸಿದರು. 1975-80 ರ ಅವಧಿಯಲ್ಲಿ ಜನಾರ್ಧನ ಪೂಜಾರಿ ಅವರು ಬಡಮಂದಿಯ ಬ್ಯಾಂಕ್ ಖಾತೆಗಳನ್ನು ತೆರೆಸಿ ಸಾಲ ಯೋಜನೆಯ ಸೌಲಭ್ಯವನ್ನು ಒದಗಿಸಿದ್ದರೆಂದು ಶಶಿಧರ್ ಹೇಳಿದರು. ಪ್ರಸ್ತುತ ಮೋದಿ ಅವರ ಪ್ರತಿಯೊಂದು ಕಾರ್ಯವನ್ನು ವೈಭವೀಕರಿಸಿ ಮತ ಪಡೆಯುವ ಪ್ರಯತ್ನಕ್ಕೆ ಬಿಜೆಪಿ ಮುಂದಾಗಿದೆ ಯೆಂದು ಆರೋಪಿಸಿ ದರು. ಜಿಲ್ಲಾ ಬಿಜೆಪಿ ವಕ್ತಾರ ಅಭಿಮನ್ಯುಕುಮಾರ್ ಅವರು ಇಲ್ಲಿನ ಕಾಂಗ್ರೆಸ್ ಅಭ್ಯರ್ಥಿ ವಿಜಯ ಶಂಕರ್ ಅವರು ತಾವು ಹಿಂದೆ ಬಿಜೆಪಿ ಪಕ್ಷದಲ್ಲಿದ್ದುದನ್ನು ಟೀಕಿಸುವ ಹಂತದಲ್ಲಿ ಯೋಚಿಸಬೇಕೆಂದು ತಿಳಿಸಿದ್ದಾರೆ.

ಅದೇ ರೀತಿ ಅಭಿಮನ್ಯು ಕುಮಾರ್ ಅವರು ಹಿಂದೆ ಜನತಾ ಪಕ್ಷದಲ್ಲಿ ಇದ್ದುದನ್ನೊಮ್ಮೆ ಯೋಚಿಸಿಕೊಳ್ಳಲಿ ಎಂದು ತಿರುಗೇಟು ನೀಡಿದರು. ಜಿಲ್ಲಾ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘÀಟನೆಯ ಜಿಲ್ಲಾ ಸಂಯೋಜಕ ತೆನ್ನಿರ ಮೈನಾ ಮಾತನಾಡಿದರು. ಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಎಸ್.ಐ. ಮುನೀರ್ ಅಹಮ್ಮದ್, ಕುಶಾಲನಗರ ಬ್ಲಾಕ್ ಪದಾಧಿಕಾರಿ ಸಬಾಸ್ಟಿನ್, ಕುಶಾಲನಗರ ಬ್ಲಾಕ್ ಸಂಚಾಲಕ ಅಬ್ದುಲ್ ಖಾದರ್ ಹಾಗೂ ನಗರಸಭಾ ಮಾಜಿ ಸದಸ್ಯ ಪ್ರಕಾಶ್ ಆಚಾರ್ಯ ಉಪಸ್ಥಿತರಿದ್ದರು.