ವೀರಾಜಪೇಟೆ, ಏ. 3: ಕಳೆದ ಒಂದು ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ರಾಜ್ಯ ಸರಕಾರದ ಯೋಜನೆಯ ಇಂದಿರಾ ಕ್ಯಾಂಟಿನ್ ಮುಂದಿನ ಮೇ ಮೊದಲ ವಾರದಲ್ಲಿ ವೀರಾಜಪೇಟೆಯಲ್ಲಿ ಉದ್ಘಾಟನೆ ಗೊಳಿಸಲು ಎಲ್ಲಾ ಸಿದ್ಧತೆಗಳು ನಡೆದಿವೆ.

ಸುಮಾರು ರೂ. 27 ಲಕ್ಷ ವೆಚ್ಚದಲ್ಲಿ ಇಲ್ಲಿನ ಗೋಣಿಕೊಪ್ಪ ರಸ್ತೆಯ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದ ಮುಂಭಾಗದಲ್ಲಿ ನಿರ್ಮಾಣವಾಗುತ್ತಿ ರುವ ಆಧುನಿಕ ಸೌಲಭ್ಯಗಳನ್ನೊಳ ಗೊಂಡ ಇಂದಿರಾ ಕ್ಯಾಂಟಿನ್ ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ಕೊಡಗಿನ ಮೂರು ತಾಲೂಕು ಕೇಂದ್ರಗಳಿಗೆ ಮಂಜೂರಾಗಿತ್ತು. ಈ ಪೈಕಿ ಮಡಿಕೇರಿಯಲ್ಲಿ ಕೆಲವು ತಿಂಗಳ ಹಿಂದೆಯೇ ಇಂದಿರಾ ಕ್ಯಾಂಟಿನ್‍ಗೆ ಚಾಲನೆ ನೀಡಲಾಗಿದೆ. ಈಗ ವೀರಾಜಪೇಟೆಯಲ್ಲಿ ಕ್ಯಾಂಟಿನ್‍ಗಾಗಿ ಮೊದಲೇ ತಯಾರಿಸಿದ್ದ ಫ್ರಿ ಕ್ಯಾಸ್ಟ್ ಫೆಬ್ರಿಕೇಶನ್ ವಾಲ್‍ನ್ನು ಬಳಸಿ ಇಂದಿರಾ ಕ್ಯಾಂಟಿನ್‍ನ್ನು ಕಟ್ಟಲಾಗಿದೆ.

ವೀರಾಜಪೇಟೆ ಪ.ಪಂ., ಇಂದಿರಾ ಕ್ಯಾಂಟಿನ್‍ಗೆ ಜಾಗ ಗುರುತಿಸಿ ಕ್ಯಾಂಟಿನ್ ಗುತ್ತಿಗೆದಾರರಿಗೆ ಹಸ್ತಾಂತರಿಸಿದ್ದರು. ಈ ಜಾಗದ ಬಳಿಯಲ್ಲಿ ಭಾರೀ ಮರವೊಂದು ಕ್ಯಾಂಟಿನ್ ನಿರ್ಮಾಣಕ್ಕೆ ಅಡ್ಡಿಪಡಿಸಿ ದ್ದರಿಂದ ಎರಡು ಸಂಘಟನೆಗಳ ನಡುವೆ ವಿವಾದ ಏರ್ಪಟಿತ್ತು. ಕೊನೆಗೂ ಮರವನ್ನು ಕೆಡವಿ ಕ್ಯಾಂಟಿನ್ ನಿರ್ಮಾಣಕ್ಕೆ ಅನುವು ಮಾಡಿಕೊಡಲಾಯಿತು. ನಂತರ ಪುತ್ತೂರು ಸಾರಿಗೆ ವಿಭಾಗಕ್ಕೆ ಸೇರಿದ ಈ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಜಾಗವನ್ನು ಕ್ಯಾಂಟಿನ್ ನಿರ್ಮಾಣಕ್ಕೆ ತೆರವು ಮಾಡಿಕೊಡು ವದಿಲ್ಲ ಎಂದು ಅಧಿಕಾರಿಗಳು ಪಟ್ಟು ಹಿಡಿದಿದ್ದರೂ ಆಗಿನ ಜಿಲ್ಲಾಧಿಕಾರಿಯ ಮಧ್ಯಸ್ಥಿಕೆ ಯೊಂದಿಗೆ ಕೊನೆ ಗಳಿಗೆಯಲ್ಲಿ ಜಾಗ ಬಿಟ್ಟು ಕೊಡಲು ಅಧಿಕಾರಿಗಳು ಸಮ್ಮತಿಸಿದ ಬಳಿಕ ಕ್ಯಾಂಟಿನ್ ನಿರ್ಮಾಣಕ್ಕೆ ಸಿದ್ಧತೆ ನಡೆಯಿತು.

ಈಗ ವೀರಾಜಪೇಟೆ ಪ.ಪಂ. ಅಭಿಯಂತರ ಎನ್.ಪಿ. ಹೇಮ್ ಕುಮಾರ್ ಅವರ ಉಸ್ತುವಾರಿಯಲ್ಲಿ ಇಂದಿರಾ ಕ್ಯಾಂಟಿನ್ ನಿರ್ಮಾಣದ ಲ್ಲಿದ್ದು, ಕ್ಯಾಂಟಿನ್‍ಗೆ ಅಗತ್ಯವಾದ ವಿದ್ಯುತ್, ಕುಡಿಯುವ ನೀರಿನ ಪೊರೈಕೆ ಹಾಗೂ ಸಿ.ಸಿ. ಕ್ಯಾಮೆರಾ ಅಳವಡಿಕೆಯನ್ನು ಪ.ಪಂ.ಯಿಂದ ಮಾಡಿಕೊಡಲಾಗುವದು ಎನ್ನಲಾಗಿದೆ. ಮುಂದಿನ ತಿಂಗಳಲ್ಲಿ ಚಾಲನೆ ಗೊಳ್ಳುವ ಇಂದಿರಾ ಕ್ಯಾಂಟಿನ್‍ನಲ್ಲಿ ಎಲ್ಲಾ ಹಂತದಲ್ಲಿಯೂ ಶುಚಿತ್ವ ಕಾಪಾಡಲು ಕ್ರಮ ಕೈಗೊಳ್ಳಲಾಗುವದು ಎಂದು ಹೇಮ್‍ಕುಮಾರ್ 'ಶಕ್ತಿ'ಗೆ ತಿಳಿಸಿದರು. - ಡಿ.ಎಂ.ಆರ್.