ಮಡಿಕೇರಿ. ಏ. 3: ಜಿಲ್ಲಾ ಜೆಡಿಎಸ್ ಅಧ್ಯಕ್ಷರ ನೇಮಕ ಸಂಬಂಧ ಅಸಮದಾನ ಹೊಂದಿರುವ ಪಕ್ಷದ ಹಿರಿಯ ಮುಖಂಡ ಬಿ.ಎ. ಜೀವಿಜಯ ಮೈತ್ರಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡಲು ಇನ್ನೂ ಮುಂದಾಗಿಲ್ಲ. ಇನ್ನೊಂದೆರಡು ದಿನದಲ್ಲಿ ಬೆಂಬಲಿಗರ ಸಭೆ ನಡೆಸಿ, ಕಾರ್ಯಕರ್ತರ ಅಭಿಪ್ರಾಯದಂತೆ ಈ ಚುನಾವಣೆ ಬಗ್ಗೆ ತೀರ್ಮಾನಿಸು ವದಾಗಿ ‘ಶಕ್ತಿ’ಯೊಂದಿಗೆ ಹೇಳಿದ್ದಾರೆ. ಮೈತ್ರಿ ಅಭ್ಯರ್ಥಿ ವಿಜಯಶಂಕರ್ ತಮ್ಮೊಂದಿಗೆ ಮಾತುಕತೆ ನಡೆಸದ ಬಗ್ಗೆಯೂ ಜೀವಿಜಯ ಬೇಸರ ವ್ಯಕ್ತಪಡಿಸಿದ್ದಾರೆ.

ಜೆಡಿಎಸ್ ಜಿಲ್ಲಾಧ್ಯಕ್ಷರನ್ನಾಗಿ ಕೆ.ಎಂ. ಗಣೇಶ್ ಅವರನ್ನು ಕಾರ್ಯಕರ್ತರ ಅಭಿಮತಕ್ಕೆ ವಿರುದ್ಧವಾಗಿ ನೇಮಕ ಮಾಡಿದ ಅಸಮಾಧಾನ ತನಗೆ ಮತ್ತು ಕಾರ್ಯಕರ್ತರಿಗೆ ಇನ್ನೂ ಇದೆ. ಚುನಾವಣೆ ಹಿನ್ನೆಲೆಯಲ್ಲಿ ಮುಂದಿನ ನಿರ್ಧಾರವನ್ನು ವಿಳಂಬ ಮಾಡಿದ್ದೇವೆ. ಪ್ರಸ್ತುತ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಯಾರಿಗೆ ಬೆಂಬಲ ನೀಡಬೇಕೆಂದು ಬೆಂಬಲಿ ಗರು ಕೇಳುತ್ತಿದ್ದಾರೆ. ಈಗಾಗಲೇ ಮಾಜಿ ಸಚಿವ ಮಹದೇವಪ್ಪ, ಶಾಸಕ ವೆಂಕಟೇಶ್, ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್ ತಮ್ಮನ್ನು ಭೇಟಿಯಾಗಿ ಬೆಂಬಲ ಕೋರಿದ್ದಾರೆ ಎಂದು ‘ಶಕ್ತಿ’ಯೊಂದಿಗೆ ಬಿ.ಎ. ಜೀವಿಜಯ ಹೇಳಿದರು. .

ತನ್ನ ನಾಯಕರಂತಿರುವ ಜೆಡಿಎಸ್ ಕಾರ್ಯಕರ್ತರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆಯೋ ಆ ನಿರ್ಧಾರಕ್ಕೆ ತಾನೂ ಬದ್ಧ. ಹೀಗಾಗಿ ಇನ್ನೊಂದೆರೆಡು ದಿನಗಳಲ್ಲಿ ಬೆಂಬಲಿಗರ ಸಭೆ ಆಯೋಜಿಸಿ ಚುನಾವಣೆಯಲ್ಲಿ ಯಾರ ಪರ ಪ್ರಚಾರ ಕೈಗೊಳ್ಳಬೇಕೆಂದು ತೀರ್ಮಾನಿಸುವೆ ಎಂದರು.

ಕೊಡಗಿನಲ್ಲಿ ನಾವೆಲ್ಲಾ ಸೇರಿ ಕಟ್ಟಿ ಬೆಳೆಸಿದ ಪಕ್ಷಕ್ಕೆ ಅಧ್ಯಕ್ಷನನ್ನು ಆಯ್ಕೆ ಮಾಡುವ ಸಂದರ್ಭ ಪಕ್ಷ ಕಟ್ಟಿದವರನ್ನೇ ಕಡೆಗಣಿಸಿದ್ದು ಸರಿಯಲ್ಲ. ನಾವೇ ಕಟ್ಟಿದ ಮನೆಯಿಂದ ನಮ್ಮನ್ನೇ ದೂರವಿಡುವ ಪ್ರಯತ್ನ ಮಾಡ ಲಾಗುತ್ತಿದೆ. ಯಾರು ಯಾರನ್ನೋ ಮನೆಯಲ್ಲಿ ಕೂರಿಸಿದರೆ ಅದನ್ನು ಒಪ್ಪಿಕೊಳ್ಳುವದು ಹೇಗೆಂದು ಪ್ರಶ್ನಿಸಿದ ಜೀವಿಜಯ, ರಾಜಕಾರಣಿ ಯಿಂದ ರಾಜಕೀಯ ಬದಲಾಗಬೇಕು ಎಂದು ಸೂಚ್ಯವಾಗಿ ತಿಳಿಸಿದರು.

ಚುನಾವಣೆಗಳಲ್ಲಿ ಪರಸ್ಪರ ದೋಷಾರೋಪ ಕೇಳಿದಾಗ; ಸಾಮಾಜಿಕ ಕಳಕಳಿಯೇ ಮಾಯವಾ ಗುತ್ತಿದೆ ಎಂದು ವಿಷಾಧಿಸಿದ ಜೀವಿಜಯ, ವೈಯಕ್ತಿಕ ನೆಲೆಗಟ್ಟಿನಲ್ಲಿ ಟೀಕಿಸುವದು ಖಂಡಿತಾ ಸರಿಯಲ್ಲ. ನಮ್ಮ ಸಂಸ್ಕøತಿಗೂ ಪಾಶ್ಚಾತ್ಯ ಸಂಸ್ಕøತಿಗೂ ವ್ಯತ್ಯಾಸವಿದೆ. ಭಾರತದ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗದ ರೀತಿಯಲ್ಲಿ ನಿಯಮಗಳು ಪಾಲನೆಯಾಗಬೇಕು. ಇಷ್ಟ ಬಂದ ರೀತಿಯಲ್ಲಿ ದೇಶ ನಡೆಸುತ್ತೇವೆ ಎಂಬ ಮನಸ್ಥಿತಿ ಸರಿಯಲ್ಲ ಎಂದು ಪ್ರಸ್ತುತ ಆಡಳಿತ ವೈಖರಿಯನ್ನು ದೂಷಿಸಿದರು.

ಮೋದಿ ಸರ್ಕಾರ ನೋಟು ಅಮಾನ್ಯೀಕರಣ ಕೈಗೊಂಡದ್ದು, ಜಿಎಸ್‍ಟಿ ಅಳವಡಿಸಿದ್ದು, ತೆರಿಗೆ ಹೊರೆ ಹೆಚ್ಚಿಸಿದ್ದು ಜನಸಾಮಾನ್ಯರಿಗೆ ನೋವುಂಟು ಮಾಡಿದೆ. ಜತೆಗೆ, ಪುಲ್ವಾಮದಲ್ಲಿ ಸಂಭವಿಸಿದ ಸೈನಿಕರ ಹತ್ಯಾಕಾಂಡದಲ್ಲಿ ಉಗ್ರರು ಸೈನಿಕರ ವಾಹನಗಳ ಮೇಲೆ ಧಾಳಿ ನಡೆಸಿದ್ದು ಹೇಗೆ ಎಂಬ ಪ್ರಶ್ನೆಗೂ ಕೇಂದ್ರ ಸರ್ಕಾರ ಉತ್ತರಿಸುತ್ತಿಲ್ಲ. ಇದೆಲ್ಲವನ್ನೂ ಜನರು ಗಮನಿಸಿ ಮತ ಹಾಕುತ್ತಾರೆ ಎಂದು ಅಭಿಪ್ರಾಯಪಟ್ಟರು.