ಮಡಿಕೇರಿ, ಏ. 2: ಪೊನ್ನಂಪೇಟೆ ಗ್ರಾಮದ ಪ್ರಸಿದ್ಧ ಪೂಳೆಮಾಡ್ ಶ್ರೀ ಈಶ್ವರ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ. ತಾ. 6ರಂದು ಸಂಜೆ 4 ಗಂಟೆಗೆ ಪೊನ್ನಂಪೇಟೆ ‘ರಂಗಭೂಮಿ ಪ್ರತಿಷ್ಠಾನ ಕೊಡಗು’ ಸಂಸ್ಥೆಯಿಂದ ಕೊಡಗಿನ ಖ್ಯಾತ ರಂಗ ಕಲಾವಿದ ಅಡ್ಡಂಡ ಕಾರ್ಯಪ್ಪ ರಚಿಸಿ ನಿರ್ದೇಶಿಸಿರುವ ‘ಬದ್‍ಕ್’ ಕೊಡವ ನಾಟಕ ಪ್ರದರ್ಶನಗೊಳ್ಳಲಿದೆ.

ಕಾರ್ಯಪ್ಪ ಮತ್ತು ಅನಿತಾ ದಂಪತಿಗಳು ನಟಿಸಿರುವ ಈ ನಾಟಕ ದೇಶದ ಹಲವೆಡೆ ಪ್ರದರ್ಶನಗೊಂಡು ಅಪಾರ ಜನಮನ್ನಣೆ ಗಳಿಸಿದೆ. ಈ ಕಾರ್ಯಕ್ರಮದ ನಂತರ ದೇವರ ಅವಭೃತ ಸ್ಥಾನ ಸಂಜೆ 6 ಗಂಟೆಗೆ ನಡೆಯಲಿದೆ ಎಂದು ದೇವಸ್ಥಾನ ಆಡಳಿತ ಮಂಡಲಿ ಅಧ್ಯಕ್ಷ ಬೊಳಿಯಂಗಡ ದಾದು ಪೂವಯ್ಯ ತಿಳಿಸಿದ್ದಾರೆ.