ಸೋಮವಾರಪೇಟೆ, ಏ. 3: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಆಸ್ತಿ ಮಾಲೀಕರು ಸ್ವಯಂ ಘೋಷಿತ ಆಸ್ತಿಯನ್ನು ಆಯ್ದ ಬ್ಯಾಂಕ್‍ಗಳಲ್ಲಿ ಪಾವತಿಸಬೇಕಿದ್ದು, 2019-20 ನೇ ಸಾಲಿನ ಆಸ್ತಿ ತೆರಿಗೆಯನ್ನು 30.04.2019 ರೊಳಗೆ ಸಂಪೂರ್ಣವಾಗಿ ಪಾವತಿಸಿದರೆ ಶೇ. 5 ರಷ್ಟು ರಿಯಾಯಿತಿ ಸೌಲಭ್ಯವಿರುತ್ತದೆ ಎಂದು ಮುಖ್ಯಾಧಿಕಾರಿ ನಟರಾಜ್ ತಿಳಿಸಿದ್ದಾರೆ.

ಮೇ ತಿಂಗಳಿನಿಂದ ಜೂನ್-2019 ರೊಳಗೆ ಪಾವತಿಸಿದರೆ ಬಡ್ಡಿ ರಹಿತವಾಗಿರುತ್ತದೆ. ಜೂನ್-2019 ರ ನಂತರ ಪಾವತಿಸಿದವರಿಗೆ ಮಾಸಿಕ ಶೇ.2 ರಷ್ಟು ಬಡ್ಡಿ ವಿಧಿಸಲಾಗುವದು. ಆದ್ದರಿಂದ 30ನೇ ಏಪ್ರೀಲ್-2019 ರೊಳಗೆ ತೆರಿಗೆ ಪಾವತಿಸಿ ಶೇ. 5 ರ ರಿಯಾಯಿತಿ ಸೌಲಭ್ಯ ಪಡೆಯುವಂತೆ ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂ. ಸಂಖ್ಯೆ 08276-282037ನ್ನು ಸಂಪರ್ಕಿಸಬಹುದಾಗಿದೆ.