ಮಡಿಕೇರಿ, ಏ. 2: ಮೂರ್ನಾಡು ಪದವಿ ಕಾಲೇಜಿನಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದ ಸರ್ಟಿಫಿಕೇಟ್ ಕೋರ್ಸ್‍ನ ಮುಕ್ತಾಯ ಸಮಾರಂಭ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ವಿಜಯ ಕರ್ನಾಟಕದ ವರದಿಗಾರ ತೇಲಪಂಡ ಕವನ್ ಕಾರ್ಯಪ್ಪ, ಚಿಕ್ಕಅಳುವಾರ ಸ್ನಾತಕೋತ್ತರ ಕನ್ನಡ ವಿಭಾಗದ ಉಪನ್ಯಾಸಕ ಝಮೀರ್ ಅಹಮದ್ ಹಾಗೂ ಮಾಲತಿ ದೇವಯ್ಯ ಆಗಮಿಸಿದ್ದರು.

ತೇಲಪಂಡ ಕವನ್ ಕಾರ್ಯಪ್ಪ ಮಾತನಾಡಿ, ಗ್ರಾಮೀಣ ವಿದ್ಯಾರ್ಥಿಗಳಿಗೆ ಈ ರೀತಿಯ ತರಗತಿಗಳು ಹೆಚ್ಚು ಉಪಯುಕ್ತ ವಾದವು, ಇದನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳಿದರು.

ಉಪನ್ಯಾಸಕ ಝಮೀರ್ ಅಹಮದ್ ತಮ್ಮ ಉಪನ್ಯಾಸದಲ್ಲಿ ಮೂಡನಂಭಿಕೆ ಹಾಗೂ ವ್ಯಕ್ತಿತ್ವ ವಿಕಸನದ ಬಗ್ಗೆ ಮಾತನಾಡಿ, ತಮ್ಮ ದಿನನಿತ್ಯದ ಜೀವನದಲ್ಲಿ ಹೆಚ್ಚು ಮೂಢನಂಭಿಕೆಗೆ ಒಳಗಾಗುತ್ತಿರುವವರು ಶಿಕ್ಷಿತ ವರ್ಗದವರೇ, ಕಾಲ ಮುಂದುವರೆದಂತೆ ಮೂಡÀನಂಭಿಕೆಗಳು ಜೊತೆ ಜೊತೆಗೆ ಬೆಳೆಯುತ್ತಿರುವದು ದುರಂತವೇ ಸರಿ ಎಂದು ಅಭಿಪ್ರಾಯಪಟ್ಟರು.

ಪ್ರಥಮ ಬಿಕಾಂ ವಿದ್ಯಾರ್ಥಿಗಳಿಗೆ ಯೋಗ ಮತ್ತು ದ್ಯಾನದ, ದ್ವಿತೀಯ ಬಿಕಾಂ ವಿದ್ಯಾರ್ಥಿಗಳಿಗೆ ಪತ್ರಿಕೋದ್ಯಮ ಮತ್ತು ಸಂವಹನ ಮಾಧ್ಯಮ ಹಾಗೂ ಅಂತಿಮ ಬಿಕಾಂ ವಿದ್ಯಾರ್ಥಿಗಳಿಗೆ ಸಂವಹನ ಇಂಗ್ಲೀಷ್ ತರಗತಿಯ ಪ್ರಮಾಣಪತ್ರವನ್ನು ವಿತರಿಸಲಾಯಿತು.

ಈ ಸಂದರ್ಭ ಕಾಲೇಜಿನ ಉಪನ್ಯಾಸಕ ವೃಂದದವರು ಹಾಜರಿದ್ದರು ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ ತಿಳಿಸಿದ್ದಾರೆ.