ಚೆಟ್ಟಳ್ಳಿ, ಏ. 2: ಚೆಟ್ಟಳ್ಳಿ ಫ್ರೌಡಶಾಲಾ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲೆಯ ಪ್ರಬಾರ ಮುಖ್ಯ ಶಿಕ್ಷಕ ಜಿ.ಸಿ. ಸತ್ಯನಾರಾಯಣ, ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಿ ಉತ್ತೀರ್ಣರಾಗಬೇಕು ಎಂದರು. ಅಲ್ಲದೆ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಅಂಕಗಳಿಸಿ ಶಾಲೆಗೆ ಒಳ್ಳೆಯ ಫಲಿತಾಂಶವನ್ನು ತರಬೇಕು ಎಂದರು.
ಈ ಸಂದರ್ಭ ಶಿಕ್ಷಕರಾದ ತಿಲಕ, ಸುನಂದಾ, ಸತೀಶ್, ನೂಥನ, ಫಸೀಲಾ ಇದ್ದರು.