ಚೆಟ್ಟಳ್ಳಿ, ಏ. 3: ಕೊಡಗಿನ ಬಡವರ ಬೆಳಕು ಸಂಘದ ವತಿಯಿಂದ ಕಿಡ್ನಿ ನಿಷ್ಕ್ರಿಯಗೊಂಡ ಬಡ ವ್ಯಕ್ತಿಗೆ ರೂ. 60 ಸಾವಿರ ಧನಸಹಾಯ ಮಾಡಿ ಬಡ ಕುಟುಂಬಕ್ಕೆ ಬೆಳಕನ್ನು ಚೆಲ್ಲಿದ್ದಾರೆ. ತನ್ನ ಎರಡೂ ಕಿಡ್ನಿಯನ್ನು ಕಳೆದುಕೊಂಡ ಕೊಂಡಂಗೇರಿಯ ಮೂಸಾ ಎಂಬ ಬಡ ಕುಟುಂಬದ ವ್ಯಕ್ತಿಗೆ ಧನಸಹಾಯ ಮಾಡಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ. ಮುಂದಿನ ಭವಿಷ್ಯಕ್ಕಾಗಿ ಸಹಾಯವಾಗಲೆಂದು ಅರವತ್ತು ಸಾವಿರ ರೂಪಾಯಿ ನೀಡಿದೆ.
ಬಡ ಕುಟುಂಬವೊಂದಕ್ಕೆ ಸುಮಾರು ಐದು ಲಕ್ಷ ವೆಚ್ಚದಲ್ಲಿ ಮನೆ ಕಟ್ಟಿ ಕೊಡಬೇಕೆಂಬ ಯೋಜನೆಯನ್ನು ಹಾಕಿಕೊಂಡಿದ್ದು, ಇನ್ನೂ ಕೆಲವೇ ದಿನಗಳಲ್ಲಿ ಅದರ ಶಂಕುಸ್ಥಾಪನೆ ನಡೆಯಲಿರುವದಾಗಿ ಕೊಡಗು ಬಡವರ ಬೆಳಕು ಸಂಘದ ಅಧ್ಯಕ್ಷ ಎಂ.ಹೆಚ್. ಮುಹಮ್ಮದ್ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಫತಾಹ್ ಕಡಂಗ, ಕಾರ್ಯಾಧ್ಯಕ್ಷ ಮಜೀದ್ ಚೋಕಂಡಳ್ಳಿ, ಪ್ರಧಾನ ಕಾರ್ಯದರ್ಶಿ ಗಳಾದ ನಾಸೀರ್ ಮಕ್ಕಿ, ಕಾರ್ಯದರ್ಶಿಗಳಾದ ನೌಶಾದ್ ಜನ್ನತ್, ಸಹ ಕಾರ್ಯದರ್ಶಿ ಶಫೀಕ್ ಗುಂಡಿಗೆರೆ, ಖಜಾಂಚಿ ಶಫೀಕ್ ಸಿ.ಹೆಚ್, ನಿರ್ದೇಶಕರುಗಳಾದ ಮಜೀದ್ ಕೊಂಡಂಕೇರಿ, ನಾಸೀರ್ ಹುಂಡಿ, ಜಲೀಲ್ ಅಮ್ಮತ್ತಿ, ನಜೀರ್ ಚಾಮಿ ಹಾಗೂ ಮತ್ತಿತರರು ಭಾಗವಹಿಸಿದ್ದರು.