ವೀರಾಜಪೇಟೆ, ಏ. 3: ವೀರಾಜಪೇಟೆ ಪಟ್ಟಣ ಪಂಚಾಯಿತಿ ಪೌರ ಕಾರ್ಮಿಕರಿಗೆ ಕೆಲಸ ಮಾಡುವ ಸ್ಥಳದಲ್ಲಿಯೇ ಉಪಾಹಾರ ನೀಡುವ ಕಾರ್ಯಕ್ರಮಕ್ಕೆ ಪಂಚಾಯಿತಿ ಚಾಲನೆ ನೀಡಿದೆ.

ಪಟ್ಟಣ ಪಂಚಾಯಿತಿ ಪೌರ ಕಾರ್ಮಿಕರಿಗೆ ಬೆಳಗಿನ ಉಪಾಹಾರ ನೀಡುವ ಯೋಜನೆಯನ್ನು ಸರಕಾರ ಕೆಲವು ತಿಂಗಳ ಹಿಂದೆಯೇ ಜಾರಿಗೊಳಿಸಿದೆ. ಆದರೆ ಬೆಳಗಿನ ಉಪಹಾರಕ್ಕಾಗಿ ನೌಕರರು ಕೆಲಸ ಮಾಡುವ ಸ್ಥಳದಿಂದ ಪಟ್ಟಣ ಪಂಚಾಯಿತಿಗೆ ಬರಲು ಸುಮಾರು ಒಂದೂವರೆಯಿಂದ ಎರಡು ಕಿ.ಮೀ. ಅಂತರ ಕ್ರಮಿಸಬೇಕಾಗಿದೆ. ಇದರಿಂದ ಅನಾವಶ್ಯಕ ಆಯಾಸ ಹಾಗೂ ಸಮಯ ವ್ಯರ್ಥವಾಗುವ ಹಿನ್ನೆಲೆ ನೌಕರರು ಕೆಲಸದಲ್ಲಿ ನಿರತರಾಗಿರುವ ಸ್ಥಳಕ್ಕೆ ಉಪಾಹಾರ ಕಳಿಸಿಕೊಡುವ ವ್ಯವಸ್ಥೆ ಮಾಡಲಾಗಿದೆ ಎಂದು ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ತಿಳಿಸಿದ್ದಾರೆ.