ಸೋಮವಾರಪೇಟೆ, ಏ. 3: ಕಳೆದ ಮಳೆಗಾಲದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದ ಜಿಲ್ಲೆಯ ವಿಶ್ವಕರ್ಮ ಜನಾಂಗದವರಿಗೆ, ಮಂಗಳೂರಿನ ಶ್ರೀ ಕಾಳಿಕಾಂಬ ವಿನಾಯಕ ದೇವಾಲಯದ ಆಡಳಿತ ಮಂಡಳಿಯವರು 1 ಲಕ್ಷ ರೂ.ಗಳ ಸಹಾಯಧನ ನೀಡಿದ್ದಾರೆ.
ಮಹಿಳಾ ಸಮಾಜದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಗಳೂರು ದೇವಾಲಯ ಮಂಡಳಿಯ ಎನ್.ಎಲ್. ಬಾಬು ಆಚಾರ್ಯ ಅವರು, ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ಕೆ.ಕೆ. ರಮೇಶ್ ಅವರಿಗೆ ಸಹಾಯ ಧನದ ಚೆಕ್ ನೀಡಿದರು.
20 ಮಂದಿ ಸಂತ್ರಸ್ತರಿಗೆ ಸಹಾಯ ಧನ ವಿತರಿಸ ಲಾಯಿತು.
ಕಾರ್ಯಕ್ರಮ ದಲ್ಲಿ ಸಮಾಜದ ಜಿಲ್ಲಾಧ್ಯಕ್ಷ ಎಸ್.ಜಿ. ದೇವದಾಸ್, ಜನಾಂಗದ ಪ್ರಮುಖರಾದ ಬಿ.ಬಿ. ನಾಗರಾಜ್, ಬಿ.ಸಿ. ಅಶೋಕ್, ಶಾಂತಿ ದೇವದಾಸ್, ಬಿ.ಸಿ. ಮೋಹನ್, ಶೋಭ ಯಶ್ವಂತ್, ರಮೇಶ್ ಮತ್ತಿತರರು ಉಪಸ್ಥಿತರಿದ್ದರು.