ಕೊಡಿಗೆ, ಏ. 3: ಕತ್ತೆ ಹಾಲು ಆರೋಗ್ಯಕರವೆಂದು ಸಾರ್ವಜನಿಕರು ಮುಗಿಬಿದ್ದು ಹಾಲನ್ನು ಖರೀದಿಸಿದ ಪ್ರಸಂಗ ಸಮೀಪದ ಮುಳ್ಳುಸೋಗೆ, ಕೂಡುಮಂಗಳೂರು ಹಾಗೂ ಕೂಡಿಗೆ ವ್ಯಾಪ್ತಿಯಲ್ಲಿ ಕಂಡುಬಂದಿತ್ತು.
ಕತ್ತೆ ಹಾಲನ್ನು ಚಿಕ್ಕ ಮಕ್ಕಳಿಗೆ ಕುಡಿಸಿದರೆ ಕೆಮ್ಮು, ನೆಗಡಿ, ಹೊಟ್ಟೆ ಊತ ಮುಂತಾದ ರೋಗಗಳು ಶಮನವಾಗುತ್ತದೆ ಎಂದು ತಮಿಳುನಾಡು ಮೂಲದ ವ್ಯಕ್ತಿಗಳು ತಮಿಳುನಾಡಿನಿಂದ ಕತ್ತೆಗಳನ್ನು ತಂದು ಕತ್ತೆ ಹಾಲನ್ನು ಮಾರಾಟ ಮಾಡುತ್ತಿದ್ದಾರೆ. ಒಂದು ಗ್ಲಾಸ್ ಕತ್ತೆ ಹಾಲಿಗೆ 150 ರೂಗಳಂತೆ ಸ್ಥಳದಲ್ಲೇ ಕತ್ತೆಯಿಂದ ಹಾಲನ್ನು ಕರೆದು ಮಾರಾಟ ಮಾಡುತ್ತಿದ್ದಾರೆ.