ಮಡಿಕೇರಿ, ಏ. 3: ಪ್ರಾಕೃತಿಕ ವಿಕೋಪ ಸಂಭವಿಸಿದ ಸಂದರ್ಭ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ವಿತರಿಸುವ ಮೂಲಕ ನೆರವು ನೀಡಿದ್ದ ಪೊನ್ನಂಪೇಟೆ ಶ್ರೀರಾಮಕೃಷ್ಣ ಶಾರದಾಶ್ರಮ ಇದೀಗ ಮಡಿಕೇರಿ ಹಾಗೂ ಪೊನ್ನಂಪೇಟೆಯಲ್ಲಿ ಉಚಿತ ಟೈಲರಿಂಗ್ ಹಾಗೂ ಕಂಪ್ಯೂಟರ್ ತರಬೇತಿ ನೀಡಲು ಮುಂದಾಗಿದೆ. ಆಸಕ್ತರು ವಿದ್ಯಾಭ್ಯಾಸದ ಅಂಕಪಟ್ಟಿ, ಆಧಾರ್ಕಾರ್ಡ್ ಪ್ರತಿಯೊಂದಿಗೆ ಸ್ವಲಿಖಿತ ಅರ್ಜಿಯನ್ನು ಅಧ್ಯಕ್ಷರು ಶ್ರೀರಾಮಕೃಷ್ಣ ಶಾರದಾಶ್ರಮ ಪೊನ್ನಂಪೇಟೆ ಈ ಹೆಸರಿಗೆ ಬರೆದು ಶಕ್ತಿ ಪ್ರೆಸ್, ಅನಂತಶಯನ (9844576429) ಹಾಗೂ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ಅಂಡ್ ಕಂಪ್ಯೂಟರ್ ಎಜುಕೇಷನ್ ಶ್ರೀನಿಕೇತನ, ಹಳೆ ಬಸ್ ನಿಲ್ದಾಣ ರಾಂಪ್ರಸಾದ್ (9448080903) ಇಲ್ಲಿಗೆ ತಾ. 15ರೊಳಗಾಗಿ ತಲಪಿಸಬೇಕು. ಕುಶಾಲನಗರದಲ್ಲೂ ಕಂಪ್ಯೂಟರ್ ತರಬೇತಿಯನ್ನು ನೀಡಲಾಗುತ್ತದೆ.
ಈಗಾಗಲೇ ರೂ. 75 ಲಕ್ಷ ಮೌಲ್ಯದ ಪರಿಹಾರ ಸಾಮಗ್ರಿಗಳನ್ನು ವಿತರಿಸಲಾಗಿದೆ. ಮಾದಾಪುರ ಹಾಗೂ ಸೂರ್ಲಬ್ಬಿಯಲ್ಲಿ ಟೈಲರಿಂಗ್ ಹಾಗೂ ಕಸೂತಿ ತರಬೇತಿ ನೀಡಲಾಗುತ್ತಿದೆ. ಸೂರ್ಲಬ್ಬಿಯಲ್ಲಿ ಜೇನು ಕೃಷಿ ತರಬೇತಿ ನೀಡಿ ಈಗಾಗಲೇ 50ಕ್ಕೂ ಅಧಿಕ ಜೇನುಪೆಟ್ಟಿಗೆಗಳನ್ನು ವಿತರಿಸಲಾಗಿದೆ. ಮಾದಾಪುರದಲ್ಲಿ ಆಹಾರ ಸಂಸ್ಕರಣಾ ತರಬೇತಿ, ಮಾದಾಪುರ ಹಾಗೂ ಸೂರ್ಲಬ್ಬಿಯಲ್ಲಿ ಯುವ ಜನತೆಗೆ ವಾಹನ ಚಾಲನಾ ಪರವಾನಗಿ ದೊರಕಿಸಿಕೊಡುವ ಕಾರ್ಯ ಕೈಗೊಂಡಿದ್ದೇವೆ ಎಂದು ಆಶ್ರಮದ ಪ್ರಕಟಣೆ ತಿಳಿಸಿದೆ.