ಮಡಿಕೇರಿ, ಏ. 1: ಬಿಟ್ಟಂಗಾಲದ ತಂಗಾಳಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಎವೆಂಜರ್ಸ್ ಕ್ಲಬ್‍ನ ಮೂರನೇ ವರ್ಷದ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಸುಂಟಿಕೊಪ್ಪದ ಎಸ್.ಎಂ.ಸ್ಮಾಷರ್ಸ್ ತಂಡ ವಿಜೇತರಾಗಿ ಟ್ರೋಫಿ ಪಡೆದುಕೊಂಡಿದೆ. ವೀರಾಜಪೇಟೆಯ ನೀಲ್- ಸಿದ್ದಾರ್ಥ್ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಡಬೇಕಾಯ್ತು. ಬಿಟ್ಟಂಗಾಲ ತಂಡ ಮೂರನೇ ಸ್ಥಾನ ಪಡೆದುಕೊಂಡಿತು. ರೋಚಕ ಅಂತಿಮ ಪಂದ್ಯಾವಳಿಯಲ್ಲಿ ಸುಂಟಿಕೊಪ್ಪದ ಎಸ್.ಎಂ.ಸ್ಮಾಷರ್ಸ್ ತಂಡ ವೀರಾಜಪೇಟೆಯ ನೀಲ್- ಸಿದ್ದಾರ್ಥ್ ತಂಡವನ್ನು ಮಣಿಸಿತು.

ಈ ಸಂಬಂಧ ನಡೆದ ಸಮರೋಪ ಮತ್ತು ಬಹುಮಾನ ವಿತರಣಾ ಸಮಾರಂಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎಂ. ಅಬ್ದುಲ್ ಲತೀಫ್ ಅವರನ್ನು ಕ್ಲಬ್ ವತಿಯಿಂದ ಸನ್ಮಾನಿಸಲಾಯ್ತು. ಪಂದ್ಯಾವಳಿಯ ಪ್ರಾಯೋಜಕರೂ ಉದ್ಯಮಿಗಳೂ ಆದ ರಜತ್ ಶೇಟ್, ಶಹೀರ್, ಸಾಮಾಜಿಕ ಕಾರ್ಯಕರ್ತ ಡಿ.ಐ.ಎಜಾಸ್ ಅಹಮದ್, ಜಲೀಲ್, ನವಾಫ್, ರಾಝಿಖ್, ಹನೀಫ ಹಾಗೂ ಶಮೀರ್ ಹಾಜರಿದ್ದರು. ಎವೆಂಜರ್ಸ್ ಕ್ಲಬ್‍ನ ಅಧ್ಯಕ್ಷ ಮುಹಮ್ಮದ್ ಸಕ್ಲೇನ್ ಮಾತನಾಡಿದರು. ಕಾರ್ಯದರ್ಶಿ ಇರ್ಷಾದ್ (ಇಚ್ಚು) ಧನ್ಯವಾದವಿತ್ತರು.