ಕೂಡಿಗೆ, ಏ. 1: ಕೂಡಿಗೆ ಸಮೀಪದ ಹೆಗ್ಗಡಳ್ಳಿ ಗ್ರಾಮದ ಶ್ರೀ ಹರಕೆ ಚೌಡೇಶ್ವರಿ ದೇವಿ ದೇವಸ್ಥಾನ ಹಾಗೂ ನಾಗದೇವರ ವಾರ್ಷಿಕೋತ್ಸವವು ತಾ.5 ರಂದು ನಡೆಯಲಿದೆ.

ತಾ.4 ರಂದು ಸಂಜೆ ವಾಸ್ತು ಹೋಮ, ಗೋಪುರ ಕಳಸ ಪೂಜೆ ಹಾಗೂ ತಾ. 5ರಂದು ಪ್ರಾತಃಕಾಲ ಗಣಪತಿ ಹೋಮ, ದುರ್ಗಾ ಹೋಮ, ಕಲಾವೃದ್ಧಿ ಹೋಮ, ಅಭಿಷೇಕ, ಕಳಸ ಪ್ರತಿಷ್ಠಾಪನೆ, ದೇವಿಗೆ ವಿವಿಧ ಅಭಿಷೇಕಗಳು ನಡೆಯಲಿದೆ. ಸಂಜೆ ದೀಪಾಲಂಕಾರ ಮತ್ತು ವಿಶೇಷ ಪೂಜಾ ಕಾರ್ಯಕ್ರಮಗಳು, ತೀರ್ಥಪ್ರಸಾದ ಮತ್ತು ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ.