ಮಡಿಕೇರಿ, ಏ.1 : ಲೋಕಸಭಾ ಸಾರ್ವತ್ರಿಕ ಚುನಾವಣೆ-2019ರ ಮತದಾನದ ಸಂಬಂಧ ತಾ. 8 ರಂದು ಎಲ್ಲಾ ಮತದಾರರು ಅವರ ಹಕ್ಕಿನಂತೆ ಮುಕ್ತವಾಗಿ ಮತದಾನ ಮಾಡಬೇಕೆಂಬ ಸದುದ್ದೇಶದಿಂದ ಪ್ರಜಾ ಪ್ರತಿನಿಧಿ ಕಾಯ್ದೆ 1951 ರ ಕಲಂ 135(ಬಿ)(1)ರಂತೆ ಎಲ್ಲಾ ಖಾಸಗಿ ರಂಗದ ಉದ್ದಿಮೆದಾರರು, ಪ್ಲಾಂಟೇಶನ್ ಮಾಲೀಕರು, ಅಂಗಡಿ ಮತ್ತು ವಾಣಿಜ್ಯ ಸಂಸ್ಥೆ ಮಾಲೀಕರು, ಕಾರ್ಖಾನೆ ಮಾಲೀಕರು, ಹೋಟೆಲ್, ರೆಸ್ಟೋರೆಂಟ್ ಮತ್ತು ರೆಸಾರ್ಟ್ ಮಾಲೀಕರು ಹಾಗೂ ಇನ್ನಿತರೆ ಸಂಸ್ಥೆಗಳ ಮಾಲೀಕರು, ಉದ್ಯೋಗದಾತರು ಅವರ ಬಳಿ ಕೆಲಸ ಮಾಡುತ್ತಿರುವ ಕಾರ್ಮಿಕ ಮತದಾರರಿಗೆ ತಾ.18 ರಂದು ವೇತನ ಸಹಿತ ರಜೆ ನೀಡುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಆದೇಶಿಸಿದ್ದಾರೆ.

ಪ್ರಜಾ ಪ್ರತಿನಿಧಿ ಕಾಯ್ದೆ 1951ರ ಕಲಂ 135(ಬಿ)(1) ರಲ್ಲಿನ ನಿರ್ದೇಶನದ ಉಲ್ಲಂಘನೆಯು ಈ ಕಾಯ್ದೆಯ ಕಲಂ 135(ಬಿ)(3)ರಂತೆ ದಂಡನೀಯವಾಗಿರುತ್ತದೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.