ವೀರಾಜಪೇಟೆ, ಏ.1: ವೀರಾಜಪೇಟೆ ಬಳಿಯ ಕೆದಮುಳ್ಳೂರು ಗ್ರಾಮದ ಚಾಮುಂಡೇಶ್ವರಿ ದೇವಾಲಯದ ಚಾಮುಂಡಿ ದೇವರ ಉತ್ಸವವು ತಾ. 4 ಮತ್ತು 5 ರಂದು ನಡೆಯಲಿದೆ.

ತಾ.4ರಂದು ರಾತ್ರಿ ಉತ್ಸವಕ್ಕೆ ಚಾಲನೆ ತಾ. 5 ರಂದು ಪೂರ್ವಾಹ್ನ 7 ಗಂಟೆಗೆ ವಿಷ್ಣುಮೂರ್ತಿ ದೇವರ ಮೇಲೇರಿ, 11-30 ಗಂಟೆಗೆ ಚಾಮುಂಡಿ ತೆರೆ, ಸಂಜೆ 5 ಗಂಟೆಗೆ ವಿಶೇಷ ಪೂಜಾ ಸೇವೆಯೊಂದಿಗೆ ಉತ್ಸವಕ್ಕೆ ಮುಕ್ತಾಯಗೊಳ್ಳಲಿದೆ.