ಮಡಿಕೇರಿ, ಏ.1 : ಮರಗೋಡಿನ ಗೌಡ ಫುಟ್ಬಾಲ್ ಅಕಾಡೆಮಿ ವತಿಯಿಂದ ನಾಲ್ಕನೇ ವರ್ಷದ ಗೌಡ ಫುಟ್ಬಾಲ್ ಪಂದ್ಯಾವಳಿ ಮೇ 10 ರಿಂದ ಮರಗೋಡು ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ.ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅಕಾಡೆಮಿಯ ಪದಾಧಿಕಾರಿಗಳು, ಹತ್ತು ಕುಟುಂಬ 18 ಗೋತ್ರಕ್ಕೆ ಸೇರಿದ ಗೌಡ ಜನಾಂಗದ ಕುಟುಂಬ ತಂಡಗಳ ನಡುವೆ ನಡೆಯಲಿರುವ ಈ ಪಂದ್ಯಾವಳಿಯಲ್ಲಿ ಸುಮಾರು 150 ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ. ಕಳೆದ ವರ್ಷ 120 ತಂಡಗಳು ಪಾಲ್ಗೊಂಡಿದ್ದವು ಎಂದು ತಿಳಿಸಿದರು.ಪಂದ್ಯಾವಳಿಯು ಏಳು ಆಟಗಾರರ ತಂಡಗಳ ನಡುವೆ ನಡೆಯಲಿದ್ದು, ಸಮವಸ್ತ್ರ ಮತ್ತು ಗುರುತಿನ ಚೀಟಿ ತರುವದನ್ನು ಕಡ್ಡಾಯಗೊಳಿಸಲಾಗಿದೆ ಎಂದರು.(ಮೊದಲ ಪುಟದಿಂದ) ವಿಜೇತ ತಂಡಗಳಿಗೆ 33,333 ರೂ. (ಪ್ರಥಮ), 22,222 ರೂ. (ದ್ವಿತೀಯ), 11,111 ರೂ. (ತೃತೀಯ) ಹಾಗೂ 5,555ರೂ. (ಚತುರ್ಥ) ಬಹುಮಾನ ನೀಡಲಾಗುವದಲ್ಲದೆ, ಉತ್ತಮ ಆಟಗಾರರು ಮತ್ತು ಉತ್ತಮ ತಂಡಕ್ಕೆ ವೈಯಕ್ತಿಕ ಪ್ರಶಸ್ತಿಗಳನ್ನು ನೀಡಲಾಗುವದು ಎಂದು ತಿಳಿಸಿದರು.

ಪಂದ್ಯಾವಳಿಯು ನೋಂದಣಿ ಯಾಗುವ ತಂಡಗಳನ್ನು ಆದರಿಸಿ ಹತ್ತರಿಂದ ಹನ್ನೆರಡು ದಿನ ನಡೆಯುವ ಸಾಧ್ಯತೆ ಇದೆ. ತಂಡಗಳ ನೋಂದಣಿಗೆ ಹಾಗೂ ಹೆಚ್ಚಿನ ಮಾಹಿತಿಗೆ ಮೊ.9482631474, 8277403725 ಸಂಪರ್ಕಿಸಬಹುದು. ಆಸಕ್ತ ಕುಟುಂಬ ತಂಡಗಳು ತಾ.25ರ ಒಳಗಾಗಿ ತಮ್ಮ ಕುಟುಂಬದ ಹೆಸರನ್ನು ನೋಂದಾಯಿಸಿಕೊಳ್ಳಬಹುದೆಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ಅಧ್ಯಕ್ಷ ಬಡುವಂಡ್ರ ದುಷ್ಯಂತ್, ಪದಾಧಿಕಾರಿಗಳಾದ ಕೊಂಪುಳಿರ ಪುನಿತ್, ಪಾಂಡನ ಹೃಷಿಕೇಶ್, ಸುಜಯ್ ಹಾಗೂ ಕಿರಣ್ ಕರುಂಬಯ್ಯ ಉಪಸ್ಥಿತರಿದ್ದರು.