ಕರಿಕೆ, ಏ. 1: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಮತದಾರರಲ್ಲಿ ಜಾಗೃತಿ ಹಾಗೂ ಧೈರ್ಯ ತುಂಬಲು ಮತ್ತು ನಕ್ಸಲ್ ಚಟುವಟಿಕೆಗಳನ್ನು ಹತ್ತಿಕ್ಕಲು ನಕ್ಸಲ್ ನಿಗ್ರಹ ಪಡೆಯಿಂದ ವಿಶೇಷ ಕೂಂಬಿಂಗ್ ಕಾರ್ಯಾಚರಣೆ ನಡೆಯಿತು. ಕಳೆದ ಒಂದು ವಾರದಿಂದ ಭಾಗಮಂಡಲ ಪೊಲೀಸ್ ಠಾಣಾ ವ್ಯಾಪ್ತಿಯ ಕರಿಕೆ ಗ್ರಾಮದ ಪಟ್ಟಿ, ಮೇಲಡ್ಕ, ಆನೆಪಾರೆ, ಚೆತ್ತುಕಾಯ ಸೇರಿದಂತೆ ನೆಲಜಿ, ಕಕ್ಕಬೆ, ನಾಲಡಿ, ಮುಂಡ್ರೋಟು ಮುಂತಾದ ಕಡೆ ನಕ್ಸಲ್ ನಿಗ್ರಹಪಡೆಯ ಅಧೀಕ್ಷಕರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಯುತ್ತಿರುವದಾಗಿ ‘ಶಕ್ತಿ’ಗೆ ವಿಶ್ವಾಸನೀಯ ಮೂಲಗಳಿಂದ ತಿಳಿದು ಬಂದಿದೆ. -ಹೊದ್ದೆಟ್ಟಿ ಸುಧೀರ್