ಸೋಮವಾರಪೇಟೆ, ಏ. 1: ಇಲ್ಲಿನ ಜೆಸಿಐ ಸೋ.ಪೇಟೆ ಪುಷ್ಪಗಿರಿಯ ಜೇಸಿರೇಟ್ಸ್ ವಿಭಾಗದಿಂದ ಏ. 3ರಂದು ಸ್ಥಳೀಯ ಮಹಿಳಾ ಸಮಾಜದಲ್ಲಿ ಜೇಸೀ ಪಂಚರತ್ನ ಪುರಸ್ಕಾರ ವಿತರಣಾ ಸಮಾರಂಭ ನಡೆಯಲಿದೆ ಎಂದು ಅಧ್ಯಕ್ಷೆ ಸುಮಲತ ಪುರುಷೋತ್ತಮ್ ತಿಳಿಸಿದ್ದಾರೆ. ಕಾರ್ಯಕ್ರಮವನ್ನು ಮಹಿಳಾ ಸಮಾಜದ ಅಧ್ಯಕ್ಷೆ ಗಾಯತ್ರಿ ನಾಗರಾಜ್ ಉದ್ಘಾಟಿಸಲಿದ್ದು, ನಿರ್ದೇಶಕಿ ಶೋಭಾ ಯಶ್ವಂತ್, ಉಪನ್ಯಾಸಕಿ ಅನುಪಮ, ಜೇಸೀ ಸಂಸ್ಥೆಯ ತಮನ್ನ, ಮಾಯಾ ಗಿರೀಶ್, ಪುರುಷೋತ್ತಮ್ ಅವರುಗಳು ಭಾಗವಹಿಸಲಿದ್ದಾರೆ. ಕೃಷಿ ಕ್ಷೇತ್ರದಿಂದ ಬಾಣಾವರದ ಜಯಮ್ಮ ಅವರಿಗೆ ಕೃಷಿ ರತ್ನ ಪುರಸ್ಕಾರ, ಶಿಕ್ಷಣ ಕ್ಷೇತ್ರದಿಂದ ಮದಲಾಪುರದ ಹೆಚ್.ಎಸ್. ಸುಜಾತ ಅವರಿಗೆ ವಿದ್ಯಾ ರತ್ನ ಪುರಸ್ಕಾರ, ಕ್ರೀಡಾ ಕ್ಷೇತ್ರದಿಂದ ಸೋ.ಪೇಟೆಯ ಭಾಗ್ಯ ಅವರಿಗೆ ಖೇಲ್ ರತ್ನ ಪುರಸ್ಕಾರ, ಉದ್ಯಮ ಕ್ಷೇತ್ರದಿಂದ ಯಡೂರಿನ ಸತ್ಯಪ್ರೇಮ ಅವರಿಗೆ ನಾಟಿ ವೈದ್ಯ ರತ್ನ ಪುರಸ್ಕಾರ, ಸಾಮಾಜಿಕ ಸೇವಾ ಕ್ಷೇತ್ರದಿಂದ ಕೂತಿ ಗ್ರಾಮದ ದೇವಕಿ ಅವರಿಗೆ ಮಾನವತಾ ರತ್ನ ಪುರಸ್ಕಾರ ನೀಡಿ ಗೌರವಿಸಲಾಗುವದು ಎಂದು ಜೇಸಿರೇಟ್ ಕಾರ್ಯದರ್ಶಿ ವಿದ್ಯಾ ಸೋಮೇಶ್ ಮಾಹಿತಿ ನೀಡಿದ್ದಾರೆ.