ಸುಂಟಿಕೊಪ್ಪ, ಏ. 1: ಸುಂಟಿಕೊಪ್ಪದ ಸ್ವಸ್ಥ ಶಾಲೆಯ ದಿವ್ಯಾಂಗ ಮಕ್ಕಳಿಗೆ ಹಾಗೂ ಸುಂಟಿಕೊಪ್ಪ ಗದ್ದೆಹಳ್ಳದಲ್ಲಿರುವ ವಿಕಾಸ್ ಜನ ಸೇವಾ ಟ್ರಸ್ಟ್‍ನ ಜೀವನಧಾರಿ ಅನಾಥ ಆಶ್ರಮದ ವೃದ್ಧರಿಗೆ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಉಚಿತವಾಗಿ ಉಡುಪುಗಳನ್ನು ನೀಡುವದರ ಮೂಲಕ ನೊಂದವರಿಗೆ ಸಹಾಯ ಹಸ್ತ ಚಾಚಿದ್ದಾರೆ. ನಂತರ ಮಾತನಾಡಿದ ಅವರು, ಜನ ಸೇವೆಯೇ ಜನಾರ್ಧನ ಸೇವೆ ಎಂಬಂತೆ ಬಡವರ ನಿರ್ಗತಿಕರ ಸೇವೆಯಲ್ಲಿ ತೊಡಗಿದರೆ ಅದರಲ್ಲಿ ಸಿಗುವ ನೆಮ್ಮದಿ ಬೇರೆ ಯಾವದರಲ್ಲೂ ಸಿಗುವದಿಲ್ಲ ಎಂದರು.