ಸುಂಟಿಕೊಪ್ಪ,ಏ.1: ಕಾಂಡನಕೊಲ್ಲಿ ಕಾಫಿ ತೋಟದಿಂದ ಅಕ್ರಮವಾಗಿ ಸಾಗಿಸುತ್ತಿದ್ದ 8 ಲಕ್ಷ ರೂ. ಮೌಲ್ಯದ ಬೀಟೆಮರದ ದಿಮ್ಮಿಗಳು, ಲಾರಿಯನ್ನು ಸುಂಟಿಕೊಪ್ಪ ಪೊಲೀಸರು ಸೋಮವಾರ ಮುಂಜಾನೆ ವಶಪಡಿಸಿಕೊಂಡಿದ್ದಾರೆ.

ಸುಂಟಿಕೊಪ್ಪ ಠಾಣಾ ವ್ಯಾಪ್ತಿಯ ಕಾಂಡನಕೊಲ್ಲಿ ರಾಮನಾಥ ಚೆಟ್ಟಿಯರ್ ಎಂಬವರಿಗೆ ಸೇರಿದ ತೋಟದೊಳಗೆ ಸೋಮವಾರ ಮುಂಜಾನೆ 5.30 ಗಂಟೆಯ ಸಂದರ್ಭ ಲಾರಿಯೊಂದರಲ್ಲಿ (ಕೆಎಲ್58 ಜಿ8242) ಆಕ್ರಮವಾಗಿ ಬೀಟೆಮರದ ದಿಮ್ಮಿಗಳನ್ನು ತುಂಬಿಸಿದ್ದ ಖಚಿತ ಮಾಹಿತಿ ಮೇರೆಗೆ ಸುಂಟಿಕೊಪ್ಪ ಠಾಣಾಧಿಕಾರಿ ಹಾಗೂ ಸಿಬ್ಬಂದಿ ಧಾಳಿ ನಡೆಸಿ, ಸುಮಾರು 8ಲಕ್ಷ ಮೌಲ್ಯದ ಬೀಟೆಮರದ ದಿಮ್ಮಿಗಳು ಲಾರಿ ಸೇರಿದಂತೆ 33 ಲಕ್ಷ ಮೌಲ್ಯದ ಮಾಲನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಆರೋಪಿಗಳ ಪತ್ತೆಗೆ ಕ್ರಮಕೈಗೊಂಡಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಜಯರಾಂ, ಮುಖ್ಯಪೇದೆಗಳಾದ ಖಾದರ್, ವಿಜಕುಮಾರ್, ಪೇದೆಗಳಾದ ಪುನೀತ್, ಸತೀಶ್ , ಪ್ರಶಾಂತ್, ಅಬ್ದುಲ್ ರಹೆಮಾನ್, ಹರೀಶ್,ಅಭಿಲಾಷ್ ಪಾಲ್ಗೊಂಡಿದ್ದರು.