ಸುಂಟಿಕೊಪ್ಪ, ಏ.1: ಕಳೆದ 53 ವರ್ಷಗಳಿಂದ ಗದ್ದೆಹಳ್ಳದಲ್ಲಿ ನೆಲೆಗೊಂಡಿರುವ ಶ್ರೀ ಕೊಡಗಂಲ್ಲೂರು ಭದ್ರಕಾಳಿ ಶ್ರೀಕುರುಂಭ ಭಗವತಿ ದೇವಾಲಯದ ಮಹಾಪೂಜೆಯು ತಾ.4 ಹಾಗೂ 5 ರಂದು ನಡೆಯಲಿದೆ.
ತಾ.4 ರಂದು ಬೆಳಿಗ್ಗೆ 6 ಗಂಟೆಗೆ ಗಣಪತಿ ಹೋಮ ಸಂಜೆ 6.ಗಂಟೆಗೆ ಶ್ರೀ ಮುತ್ತಪ್ಪ ಪೈಂಗುತ್ತಿ, 6.45ಕ್ಕೆ ಶ್ರೀ ಚಾಮುಂಡೇಶ್ವರಿ ದೇವಿಪೂಜೆ, 7 ಗಂಟೆಗೆ ಗುಳಿಗನ ಪೂಜೆ, 7.15ಕ್ಕೆ ಶ್ರೀಭದ್ರಕಾಳಿ ದೇವಿಗೆ ಆರ್ಚನೆ, ನೈವೇದ್ಯ ಪೂಜೆ, 7.30 ಗಂಟೆಗೆ ದೇವಿ ದರ್ಶನ, ರಾತ್ರಿ 8 ಗಂಟೆಗೆ ವಸೂರಿ ಮಾಲಾಸ್ನಾನ, ಕಳಸ ಮೆರವಣಿಗೆ ಮತ್ತು ವೆಳ್ಳಾಟಂ, 8.15ಕ್ಕೆ ತಲಪುರಿ ಮೆರವಣಿಗೆ, ರಾತ್ರಿ 8.30 ರಿಂದÀ 10.30 ರವರೆಗೆ ದೇವಿದರ್ಶನ ನಂತರ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿದೆ.
ತಾ.5 ರಂದು ಬೆಳಿಗ್ಗೆ ದೇವಿಗೆ ಹರಕೆ, 10 ರಿಂದ 11ರವರೆಗೆ ದೇವಿಗೆ ಅರ್ಪಣೆ ನಡೆಯಲಿದೆ.